ಮುಂಬಯಿ: ಪಾಕ್ ರೂಪದರ್ಶಿ ಹಾಗೂ ನಟಿ ಕಂದೀಲ್ ಬಲೂಚ್ ಹತ್ಯೆ ಪ್ರಕರಣ ಸಂಬಂಧ ಬಾಲಿವುಡ್ನ ವಿವಾದಾತ್ಮಕ ನಟಿ ರಾಕಿ ಸಾವಂತ್ ಪ್ರತಿಕ್ರಿಯಿಸಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಪಾಠಕಲಿತುಕೊಳ್ಳಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಸಂದೇಶ ರವಾನಿಸಿದ್ದಾರೆ.
ಹೆಣ್ಣು ಮಕ್ಕಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದುಬನ್ನು ಮೋದಿಯವ ಬೇಟಿ ಬಚಾವೋ ಮೂಲಕ ಕಲಿತುಕೊಳ್ಳಿ ಎಂದು ರಾಖಿ ಸಾವಂತ್ ಕಿಡಿಕಾರಿದ್ದಾರೆ. ನಮ್ಮ ದೇಶ ಬೇಟಿ ಬಚಾವೋ ಎಂದು ಹೇಳುತ್ತಿದ್ದಾರೆ, ಪಾಕಿಸ್ತಾನ ಬೇಟಿ ಹಠಾವೋ ಎನ್ನುತ್ತಿದೆ, ಇದಕ್ಕೆ ಕಂದೀಲ್ ಬಲೂಚ್ ಅವರ ಹತ್ಯೆಯೇ ಸಾಕ್ಷಿ. ದಯವಿಟ್ಟು ಷರೀಫ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳಬೇಕೆಂದು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಬೇಟಿ ಬಚಾವೋ ಆಂದೋಲನಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಋಣಿಯಾಗಿದ್ದೇನೆ. ಬೇಟಿ ಬಚಾವೋ ಎಂಬುದನ್ನು ಕೇವಲ ಧ್ಯೇಯ ವಾಕ್ಯವನ್ನಾಗಿ ಇಟ್ಟುಕೊಳ್ಳದೇ ಅದನ್ನು ಅನುಷ್ಠಾನ ಮಾಡಲು ಕಾನೂನು ತರಲು ಮೋದಿ ಹೊರಟಿದ್ದಾರೆ. ಈ ಮೂಲಕ ದೇಶದ ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣಕ್ಕೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.