ದೇಶ

ಚೀನಾ ದಾಳಿ ಭೀತಿ: ಗಡಿಯಲ್ಲಿ 100 ಯುದ್ಧ ಟ್ಯಾಂಕ್ ನಿಯೋಜಿಸಿದ ಭಾರತೀಯ ಸೇನೆ

Vishwanath S

ಲಡಾಖ್: ಗಡಿಯಲ್ಲಿ ಚೀನಾ ದಾಳಿ ನಡೆಸುವ ಸಂಭವವಿದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಭಾರತ-ಚೀನಾ ಗಡಿ ಪ್ರದೇಶದಲ್ಲಿ ಸೇನೆಯು 100 ಯುದ್ಧ ಟ್ಯಾಂಕ್ ಗಳನ್ನು ನಿಯೋಜಿಸಿದ್ದು, ಇನ್ನಷ್ಟು ಟ್ಯಾಂಕ್ ಗಳನ್ನು ನಿಯೋಜಿಸಲಿದೆ.

ಕಳೆದ ಆರು ತಿಂಗಳಿನಿಂದ ಭಾರತವು ಹಂತ ಹಂತವಾಗಿ ಲಡಾಖ್ ನ ಗಡಿ ಪ್ರದೇಶದಲ್ಲಿ ಟ್ಯಾಂಕ್ ನಿಯೋಜಿಸುತ್ತಾ ಬಂದಿದೆ. 1962ರ ಯುದ್ಧದಲ್ಲಿ ಟ್ಯಾಂಕ್ ಗಳನ್ನು ಬಳಸಿತ್ತು. ಬಳಿಕ ಇದೇ ಮೊದಲ ಬಾರಿಗೆ ಗಡಿಯಲ್ಲಿ ಮತ್ತೆ ಸೇನೆ ಟ್ಯಾಂಕ್ ನಿಯೋಜನೆ ಮಾಡಿದೆ.

ಎತ್ತರ ಪ್ರದೇಶಗಳಿಗೆ ಟ್ಯಾಂಕ್ ಗಳನ್ನು ರವಾನೆ ಮಾಡುವುದು ಸುಲಭದ ಕೆಲಸವಲ್ಲ. ಅಲ್ಲದೆ ಅಲ್ಲಿ ಆಮ್ಲಜನಕವಿಲ್ಲದೆ ಊಸಿರಾಟ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ನು ಚಳಿಗಾಳದಲ್ಲಿ 45 ಡಿಗ್ರಿ ಸೆಲ್ಷಿಯಸ್ ಗಿಂತ ಕಡಿಮೆ ಇರುತ್ತದೆ ಎಂದು ಕರ್ನಲ್ ವಿಜಯ್ ದಲಾಲ್ ಹೇಳಿದ್ದಾರೆ.

SCROLL FOR NEXT