ತೇಜಸ್ವಿ ಪ್ರಸಾದ್ ಯಾದವ್ 
ದೇಶ

ಬಿಹಾರ ಡಿಸಿಎಂ ತೇಜಸ್ವಿ ವಾಟ್ಸ್ಆ್ಯಪ್ ನಂಬರ್‌ಗೆ ಬಂತು 45 ಸಾವಿರ ಪ್ರೇಮ ಸಂದೇಶ

ಹಾಳಾದ ರಸ್ತೆಗಳ ಛಾಯಾಚಿತ್ರ ತೆಗೆದು ವಾಟ್ಸ್ಆ್ಯಪ್ ನಲ್ಲಿ ದೂರು ಸಲ್ಲಿಸುವಂತೆ ರಾಜ್ಯದ ಜನರಿಗೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿರಿಯ ಪುತ್ರ ಬಿಹಾರದ...

ಪಾಟ್ನಾ: ಹಾಳಾದ ರಸ್ತೆಗಳ ಛಾಯಾಚಿತ್ರ ತೆಗೆದು ವಾಟ್ಸ್ಆ್ಯಪ್ ನಲ್ಲಿ ದೂರು ಸಲ್ಲಿಸುವಂತೆ ರಾಜ್ಯದ ಜನರಿಗೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿರಿಯ ಪುತ್ರ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಮನವಿ ಮಾಡಿದ್ದರು. ಆದರೆ ರಾಜ್ಯದ ಹದಿಹರೆಯದ ಯುವತಿಯರು ಸಮಸ್ಯೆ ಬದಲಾಗಿ ಪ್ರೇಮಸಂದೇಶಗಳನ್ನು ಕಳುಹಿಸುತ್ತಿದ್ದಾರೆ.

ಹೌದು ರಾಜ್ಯದ ಯುವತಿಯರು ಸಮಸ್ಯೆಗಳ ಬದಲಾಗಿ ತಮ್ಮ ವಿವಿಧ ಭಂಗಿಯ ಫೋಟೋ ಕಳುಹಿಸಿ ಅದರ ಜತೆ ಹಾರ್ ಡಿಯರ್, ಐ ಲವ್ ಯೂ, ಐ ವಾಂಟ್ ಟು ಮ್ಯಾರಿ ಮೂ ಎಂಬ ಸಂದೇಶಗಳನ್ನು ಕಳುಹಿಸಿದ್ದಾರೆ.

ಕಳೆದ ವಾರವಷ್ಟೇ ತಮ್ಮ ವಾಟ್ಸ್ಆ್ಯಪ್ ನಂಬರ್ ಅನ್ನು ರಾಜ್ಯದ ಜನತೆಗೆ ನೀಡಿದ್ದ ಡಿಸಿಎಂ ಸಮಸ್ಯೆ ಕುರಿತು ದೂರು ಸಲ್ಲಿಸುವಂತೆ ತಿಳಿಸಿದ್ದರು. ಇದಾಗಿ ಒಂದು ವಾರದಲ್ಲೇ ಪ್ರೇಮಸಂದೇಶಗಳು ಬಂದಿರುವುದು ನೂರು ಇನ್ನೂರಲ್ಲ ಬರೋಬ್ಬರಿ 45 ಸಾವಿರ ಸಂದೇಶಗಳು ಬಂದಿವೆಯಂತೆ.

ರಾಜ್ಯದಲ್ಲಿ ಲಾಲು ಪ್ರಸಾದ್ ಯಾದವ್ ಕುಟುಂಬ ಅತ್ಯುನ್ನತ ಘನತೆ ಹೊಂದಿದ್ದು 26 ವರ್ಷದ ತೇಜಸ್ವಿಗೆ ಇನ್ನು ಮದುವೆಯಾಗ ಕಾರಣ ಯುವತಿಯರು ಈ ರೀತಿ ಸಂದೇಶ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಹಗ್ಗಜಗ್ಗಾಟ ನಡುವೆ ಗುಪ್ತಚರ ಮುಖ್ಯಸ್ಥರ ಬದಲಾವಣೆ: ಅಧಿಕಾರ ಇನ್ನೂ ನನ್ನ ಕೈಯಲ್ಲೇ ಇದೆ, ಕಠಿಣ ಸಂದೇಶ ರವಾನಿಸಿದ ಸಿದ್ದರಾಮಯ್ಯ..?

ಗಾಯದ ಮೇಲೆ ಬರೆ: ವಾಣಿಜ್ಯ LPG ಸಿಲಿಂಡರ್ ದರ ರೂ.993 ಏರಿಕೆ, ಹೊಸ ದರ ಇಂದಿನಿಂದ ಜಾರಿ..!

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ: 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ- ಮಮತಾ ಬ್ಯಾನರ್ಜಿ!

IPL 2026: RCB ಬ್ಯಾಟಿಂಗ್ ವೈಫಲ್ಯ, 4 ವಿಕೆಟ್ ಗಳಿಂದ ಗೆದ್ದ ಗುಜರಾತ್ ಟೈಟನ್ಸ್!

ಭಬಾನಿಪುರದ ಸ್ಟ್ರಾಂಗ್ ರೂಮ್‌ಗೆ ದೌಡಾಯಿಸಿದ ಮಮತಾ ಬ್ಯಾನರ್ಜಿ! EVM ಟ್ಯಾಂಪರಿಂಗ್ ಆರೋಪ

SCROLL FOR NEXT