ಸರಿತಾ ನಾಯರ್ 
ದೇಶ

ಐದು ರಾಜಕಾರಣಿಗಳು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ: ಸರಿತಾ ನಾಯರ್

ಕೇರಳ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ಸೇರಿದಂತೆ ಐವರು ಪ್ರಭಾವಿ ರಾಜಕಾರಣಿಗಳಿಂದ ತಾನು ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ...

ಕೊಯಂಬತ್ತೂರು: ಕೇರಳ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ಸೇರಿದಂತೆ ಐವರು ಪ್ರಭಾವಿ ರಾಜಕಾರಣಿಗಳಿಂದ ತಾನು ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ ಸೋಲಾರ ಹಗರಣದ ಆರೋಪಿ ಸರಿತಾ ನಾಯರ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಐವರು ರಾಜಕಾರಣಿಗಳು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ ಹಣಕಾಸು ಅವ್ಯವಹಾರ ಹಾಗೂ ಇತರೆ ಅಕ್ರಮಗಳಿಗೂ ನನ್ನನ್ನು ಬಳಸಿಕೊಂಡಿದ್ದಾರೆ ಎಂದು ಸರಿತಾ ಆರೋಪಿಸಿದ್ದಾರೆ.
ಇಬ್ಬರು ಮಾಜಿ ಸಚಿವರಾದ ಅರ್ಯಾದನ್ ಮೊಹಮ್ಮದ್, ಎ.ಪಿ.ಅನಿಲ್ ಕುಮಾರ್ ಹಾಗೂ ಪಿ.ಸಿ.ವಿಶುನಾಥ್ ಮತ್ತು ಕೆ.ಸಿ.ವೇಣುಗೋಪಾಲ್ ಅವರು ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದು, ಈ ಬಗ್ಗೆ ದಾಖಲೆಗಳ ಸಾಕ್ಷ್ಯಗಳನ್ನು ಸೋಲಾರ ಹಗರಣದ ತನಿಖೆ ನಡೆಸುತ್ತಿರುವ ಆಯೋಗಕ್ಕೆ ನೀಡಿರುವುದಾಗಿ ಸರಿತಾ ತಿಳಿಸಿದ್ದಾರೆ. ಅಲ್ಲದೆ ತಾನು ಆತ್ಮಚರಿತ್ರೆ ಬರೆಯುತ್ತಿರುವುದಾಗಿಯೂ ಹೇಳಿದ್ದಾರೆ.
ಮತ್ತೊಬ್ಬ ಮಾಜಿ ವಿತ್ತ ಸಚಿವ ಹಾಗೂ ಡಿಎಂಕೆ ಸದಸ್ಯ ಎಸ್.ಎಸ್. ಪಳನಿಮನಿಕಮ್ ಅವರು ತನ್ನ ಕ್ಲೈಂಟ್ ಗಳ ಆದಾಯ ತೆರಿಗೆ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿ 25 ಲಕ್ಷ ರುಪಾಯಿ ಪಡೆದಿದ್ದರು ಎಂದು ಸರಿತಾ ಹೊಸ ಆರೋಪ ಮಾಡಿದ್ದಾರೆ.
ನಾನು ಆದಾಯ ತೆರಿಗೆ ಇಲಾಖೆಗೆಯ ಕೆಂಗಣ್ಣಿಗೆ ಗುರಿಯಾಗಿದ್ದ ಒಬ್ಬ ಕ್ಲೈಂಟ್ ಪರವಾಗಿ ಪಳನಿಮುನಿಕಮ್ ಅವರನ್ನು ಭೇಟಿ ಮಾಡಿದ್ದೆ. ಈ ವೇಳೆ ಸಮಸ್ಯೆ ಪರಿಹರಿಸಲು ಅವರು 1 ಕೋಟಿ ರುಪಾಯಿ ಬೇಡಿಕೆಯಿಟ್ಟಿದ್ದರು ಮತ್ತು ಮುಂಗಡವಾಗಿ 25 ಲಕ್ಷ ಕೊಟ್ಟಿ ಎಂದು ಸರಿತಾ ನಾಯರ್ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದ್ದಾರೆ.
ಸರಿತಾ ನಾಯರ್ ಅವರು ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಂದು ಕೊಯಮತ್ತೂರು 6ನೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೆ ಹಾಜರಾಗಿದ್ದು. ಈ ವೇಳೆ ವರದಿಗಾರರೊಂದಿಗೆ ಮಾತನಾಡಿದ ಅವರು, ಸೋಲಾರ ಹಗರಣದಲ್ಲಿ ಭಾಗಿಯಾಗಿರುವ 13 ರಾಜಕಾರಣಿಗಳ ವಿರುದ್ಧ ತಾನು ವಂಚನೆ ಕೇಸ್ ದಾಖಲಿಸಿರುವುದಾಗಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT