ದೇಶ

ಕೋಮಾದಲ್ಲಿರುವ ಪತ್ನಿಗೆ ಪ್ರಜ್ಞೆ ಮರುಕಳಿಸುವವರೆಗೆ ಪತಿಯ ಅಂತ್ಯಸಂಸ್ಕಾರವಿಲ್ಲ

Shilpa D

ನವದೆಹಲಿ: ಭಾರತೀಯ ಮೂಲದ ಟೆಕ್ಕಿ ಅಮೆರಿಕದಲ್ಲಿ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದು, ಅವರ ಹೆಂಡತಿ ಕೋಮಾಗೆ ಜಾರಿರುವ ಕಾರಣ ಮೃತದೇಹದ ಅಂತ್ಯಸಂಸ್ಕಾರ ಸಾಧ್ಯವಿಲ್ಲ ಎಂದು ಅಮೆರಿಕಾ ಹೇಳಿದೆ ಎಂದು ವಿದೇಶಾಂಗ ವ್ಯವಾಹರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸುಷ್ಮಾ, ಜುಲೈ 4 ರಂದು ನ್ಯೂಯಾರ್ಕ್‍ನಲ್ಲಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕಾರ್‍ನಲ್ಲಿದ್ದ ಟೆಕ್ಕಿ ಚಂದನ್ ಗವಾಯ್ ಹಾಗೂ ಅವರ ಪೋಷಕರು ಸಾವನ್ನಪ್ಪಿದ್ದಾರೆ. ಹೆಂಡತಿ ಮನಿಷಾ ಸುರ್‍ವಾಡೆ ಕೋಮಾದಲ್ಲಿರುವ ಕಾರಣ ಚಂದನ್ ಮೃತದೇಹಕ್ಕೆ ಅಂತ್ಯ ಸಂಸ್ಕಾರ ಮಾಡಲಾಗುವುದಿಲ್ಲ, ಹೀಗಾಗಿ ಚಂದನ್ ಅವರ ದೇಹವನ್ನು ಮಣ್ಣಿನಲ್ಲಿ ಹೂಳಲಾಗಿದೆ, ಕೋಮಾದಿಂದ ಮನೀಷ್ ಹೊರಬಂದ ಮೇಲೆ ಆಕೆಯ ಅನುಮತಿ ಪಡೆದು ಶವಕ್ಕೆ ಅಗ್ನಿಸ್ಪರ್ಶ ಮಾಡಲಾಗುವುದು  ಎಂದು ಹೇಳಿದ್ದಾರೆ.

ಅಮೆರಿಕದ ನಿಯಮದ ಪ್ರಕಾರ ಪತಿ ಸಾವನ್ನಪ್ಪಿದಾಗ ಪತ್ನಿಯ ಅನುಮತಿ ಇಲ್ಲದೆ ಅಥವಾ ಪತ್ನಿ ಸಾವನ್ನಪ್ಪಿದಾಗ ಪತಿಯ ಅನುಮತಿಯಿಲ್ಲದೆ ಅಂತ್ಯಸಂಸ್ಕಾರ ನೆರವೇರಿಸುವಂತಿಲ್ಲ. ಹೀಗಾಗಿ ಮನಿಷಾ ಕೋಮಾದಿಂದ ಹೊರಬರುವವರೆಗೆ ಶವವನ್ನು ಹೂಳಲಾಗುತ್ತದೆ. ಆಕೆಗೆ ಪ್ರಜ್ಞೆ ಬಂದು ಅನುಮತಿ ನೀಡಿದ ನಂತರ ಮತ್ತೊಮ್ಮೆ ಚಂದನ್ ಶವಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ ಅಂತ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಐಟಿ ಉದ್ಯೋಗಿಯಾಗಿದ್ದ ಮಹಾರಾಷ್ಟ್ರ ಮೂಲದವರಾದ 38 ವರ್ಷದ ಚಂದನ್ ಗವಾಯ್ ಹಾಗೂ ಆತನ ಪೋಷಕರಾದ ಕಮಲ್‍ನಯನ್ ಗವಾಯ್(74) ಮತ್ತು ಅರ್ಚನಾ ಗವಾಯ್(60) ಜುಲೈ 4 ರಂದು ನ್ಯೂ ಯಾರ್ಕ್‍ನಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ರು. ಗವಾಯ್ ಕುಟುಂಬ ಪ್ರಯಾಣಿಸುತ್ತಿದ್ದ ಕಾರ್‍ಗೆ ಡಿಕ್ಕಿ ಹೊಡೆದ ಕಸದ ಟ್ರಕ್ ಚಾಲಕ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದ.

ಘಟನೆಯಲ್ಲಿ ಚಂದನ್ ಪತ್ನಿ ಮನಿಷಾ ಸುರ್‍ವಾಡೆ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ಸದ್ಯಕ್ಕೆ ಕೋಮಾಗೆ ಜಾರಿದ್ದಾರೆ. ಚಂದನ್ ಮನೀಷಾ ದಂಪತಿಯ 11 ತಿಂಗಳ ಗಂಡು ಮಗು ಪ್ರಾಣಾಪಾಯದಿಂದ ಪಾರಾಗಿದೆ.

SCROLL FOR NEXT