ಐಎಎನ್ ಎಸ್ ವಿರಾಟ್ (ಸಂಗ್ರಹ ಚಿತ್ರ) 
ದೇಶ

ಅಂತಿಮ ಪಯಣಕ್ಕೆ ಸಜ್ಜಾದ ಐಎನ್ಎಸ್ ವಿರಾಟ್!

ಭಾರತೀಯ ಸೇನೆಯ ಹೆಮ್ಮೆ ಪ್ರಬಲ ಯುದ್ಧ ನೌಕೆ ಐಎನ್ ಎಸ್ ವಿರಾಟ್ ಇದೇ ವರ್ಷಾಂತ್ಯದಲ್ಲಿ ನಿವೃತ್ತಿಯಾಗುತ್ತಿದ್ದು, ತನ್ನ ಕೊನೆಯ ಪಣಯಕ್ಕೆ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ...

ನವದೆಹಲಿ: ಭಾರತೀಯ ಸೇನೆಯ ಹೆಮ್ಮೆ ಪ್ರಬಲ ಯುದ್ಧ ನೌಕೆ ಐಎನ್ ಎಸ್ ವಿರಾಟ್ ಇದೇ ವರ್ಷಾಂತ್ಯದಲ್ಲಿ ನಿವೃತ್ತಿಯಾಗುತ್ತಿದ್ದು, ತನ್ನ ಕೊನೆಯ ಪಣಯಕ್ಕೆ ಸಕಲ ರೀತಿಯಲ್ಲೂ  ಸಜ್ಜುಗೊಂಡಿದೆ.

ಭಾರತೀಯ ಸೇನಾ ಮೂಲಗಳ ಪ್ರಕಾರ ಇದೇ ಜುಲೈ 23ರಿಂದ 27ರವರೆಗೆ ಮುಂಬೈನಲ್ಲಿರುವ ಪಶ್ಚಿಮ ನೌಕಾ ನೆಲೆಯಿಂದ ಕೊಚ್ಚಿನ್ ನಲ್ಲಿರುವ ದಕ್ಷಿಣ ನೌಕಾನೆಲೆಯತ್ತ ಐಎನ್ ಎಸ್ ವಿರಾಟ್  ಪಯಣ ಆರಂಭಿಸಲಿದ್ದು, ಇದೇ ಅಂತಿಮ ಪಯಣವಾಗಲಿದೆ ಎಂದು ತಿಳಿದುಬಂದಿದೆ. ಈ ಪಯಣದ ಬಳಿಕ ಐಎನ್ ಎಸ್ ವಿರಾಟ್ ಸೇನೆಯಿಂದ ನಿವೃತ್ತಿಯಾಗಲಿದ್ದು, ಬಳಿಕ ಒಂದಷ್ಟು ದಿನಗಳ  ಕಾಲ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.

1959ರ ನವೆಂಬರ್ 18 ರಂದು ಮೊದಲ ಬಾರಿಗೆ ಬ್ರಿಟೀಷ್ ರಾಯಲ್ ನೇವಿ ಹೆಎಂಎಸ್ ಹರ್ಮ್ಸ್ ಹೆಸರಿನಲ್ಲಿ ಈ ನೌಕೆಯನ್ನು ಸೇನೆಗೆ ನಿಯೋಜಿಸಿತ್ತು. ಬಳಿಕ ಭಾರತೀಯ ಸೇನೆಗೆ  ಸೇರ್ಪಡೆಯಾದ ನೌಕೆಗೆ ಐಎನ್ ಎಸ್ ವಿರಾಟ್ ಮರು ನಾಮಕರಣ ಮಾಡಿ ಸೇನೆಗೆ ನಿಯೋಜಿಸಲಾಯಿತು. ಇದೀಗ ಈ ನೌಕೆಯ ನಿರ್ವಹಣೆ ದುಬಾರಿಯಾಗುತ್ತಿರುವ ಹಿನ್ನಲೆಯಲ್ಲಿ ನೌಕೆಯನ್ನು  ನಿವೃತ್ತಿಗೊಳಿಸಲು ನಿರ್ಧರಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿರುವ ಹಿರಿಯ ನೌಕಾ ಆಧಿಕಾರಿಯೊಬ್ಬರು, ನೌಕೆಯ ಎಂಜಿನ್ ತುಂಬಾ ಹಳೆಯದಾಗಿದೆ. ಅಲ್ಲದೆ ಇವುಗಳ ಬಿಡಿಭಾಗಗಳ ನಿರ್ವಹಣೆ ಕೂಡ ದುಬಾರಿಯಾಗುತ್ತಿದೆ. ಹೀಗಾಗಿ  ನೌಕೆಯನ್ನು ನಿವೃತ್ತಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಇದೇ ಐಎನ್ ಎಸ್ ವಿಕ್ರಮಾಧಿತ್ಯದ ಶೌಚಾಲಯದ ಟ್ಯಾಂಕ್ ಅನ್ನು ದುರಸ್ತಿಗೊಳಿಸುತ್ತಿದ್ದಾಗ  ಸಂಭವಿಸಿದ ಸ್ಫೋಟದಲ್ಲಿ ಓರ್ವ ಇಂಜಿನಿಯರ್ ಮೃತಪಟ್ಟಿದ್ದ. ಅಲ್ಲದೆ ಘಟನೆಯಲ್ಲಿ ಇತರೆ ಮೂವರು ಕಾರ್ಮಿಕರು ಗಾಯಗೊಂಡಿದ್ದರು.

ನಿವೃತ್ತಿ ಬಳಿಕ ಐಎನ್ ಎಸ್ ವಿರಾಟ್ ಯುದ್ಧ ನೌಕೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಪ್ರಸ್ತಾವನೆ ಇದೆಯಾದರೂ, ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT