ರಾಜ್ಯ ಸಭೆ ಕಲಾಪ (ಸಂಗ್ರಹ ಚಿತ್ರ) 
ದೇಶ

ರಾಜ್ಯ ಸಭೆ ಕಲಾಪ ನುಂಗಿ ಹಾಕುತ್ತಿರುವ "ದಲಿತರ ಮೇಲಿನ ಹಲ್ಲೆ"..!

ಗುಜರಾತ್ ನಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣ ಉಭಯ ಸದನಗಳಲ್ಲಿ ಭಾರಿ ಚರ್ಚೆಗೆ ಸುದ್ದಿಯಾಗಿರುವಂತೆಯೇ ಬಿಎಸ್ ಪಿ ಮುಖಂಡೆ ಮಾಯವತಿ ವಿರುದ್ಧದ ಬಿಜೆಪಿಯ ಉತ್ತರ ಪ್ರದೇಶ ಉಪಾಧ್ಯಕ್ಷ ದಯಾಶಂಕರ್ ಹೇಳಿಕೆ ಗಾಯದ ಮೇಲೆ ಉಪ್ಪು ಸುರಿದಂತೆ ಆಗಿದೆ.

ನವದೆಹಲಿ: ಗುಜರಾತ್ ನಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣ ಉಭಯ ಸದನಗಳಲ್ಲಿ ಭಾರಿ ಚರ್ಚೆಗೆ ಸುದ್ದಿಯಾಗಿರುವಂತೆಯೇ ಬಿಎಸ್ ಪಿ ಮುಖಂಡೆ ಮಾಯವತಿ ವಿರುದ್ಧದ ಬಿಜೆಪಿಯ ಉತ್ತರ  ಪ್ರದೇಶ ಉಪಾಧ್ಯಕ್ಷ ದಯಾಶಂಕರ್ ಹೇಳಿಕೆ ಗಾಯದ ಮೇಲೆ ಉಪ್ಪು ಸುರಿದಂತೆ ಆಗಿದೆ.

ಎರಡೂ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಸವಾರಿ ಮಾಡಲು ಯತ್ನಿಸುತ್ತಿದ್ದು, ಉಭಯ ಸದನಗಳಲ್ಲಿ ಭಾರಿ ಕೋಲಾಹಲ  ಸೃಷ್ಟಿಯಾಗಿದೆ. ಇನ್ನು ರಾಜ್ಯಸಭೆಯಲ್ಲಿಯೂ ದಲಿತರ ಮೇಲಿನ ಹಲ್ಲೆ ಮಾರ್ದನಿಸುತ್ತಿದ್ದು, ಈ ಪ್ರಕರಣದ ಮೇಲಿನ ಚರ್ಚೆಗಾಗಿಯೇ ಸ್ಪೀಕರ್ ವಿಶೇಷ ಕಾಲಾವಕಾಶ ನೀಡಿದ್ದಾರೆ. ಆದರೂ  ಪ್ರತಿಪಕ್ಷಗಳು ಈ ವಿಚಾರವಾಗಿ ತಣ್ಣಗಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ.

ಗುಜರಾತ್‍ನ ಉನಾದಲ್ಲಿ ಸತ್ತ ಹಸುವಿನ ಚರ್ಮ ತೆಗೆಯುತ್ತಿದ್ದ ದಲಿತ ವ್ಯಕ್ತಿಗಳ ಮೇಲೆ ತ೦ಡವೊ೦ದು ಹಲ್ಲೆ ನಡೆಸಿದ ಪ್ರಕರಣ ಮು೦ದಿಟ್ಟುಕೊ೦ಡ ಕಾ೦ಗ್ರೆಸ್, ಬಿಎಸ್ ಪಿ ಸೇರಿದಂತೆ  ಮತ್ತಿತರ ಪಕ್ಷಗಳು ಬಿಜೆಪಿಯನ್ನು ತರಾಟೆಗೆ ತೆಗೆದುಕೊ೦ಡವು. ಕೆಲ ಹಿ೦ದುತ್ವ ಸ೦ಘಟನೆಗಳು ದಲಿತ ಮುಕ್ತ ಭಾರತಕ್ಕೆ ಯತ್ನಿಸುತ್ತಿವೆ. ಇದಕ್ಕೆ ಬಿಜೆಪಿ ಸಹಕಾರ ನೀಡುತ್ತಿದೆ ಎಂದು ಗಂಭೀರ  ಆರೋಪ ಮಾಡಿದವು. ಅಲ್ಲದೆ ಮು೦ಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ ಧ್ರುವೀಕರಣಕ್ಕೆ ಮು೦ದಾಗಿದೆ ಎ೦ದು ಸ೦ಸತ್‍ನಲ್ಲಿ ಕಾ೦ಗ್ರೆಸ್ ನಾಯಕರು ಗದ್ದಲ  ಎಬ್ಬಿಸಿದರು. ಅಲ್ಲದೇ ಪ್ರಕರಣದ ತನಿಖೆಗಾಗಿ ಜ೦ಟಿ ಸ೦ಸದೀಯ ಸಮಿತಿ ರಚಿಸುವ೦ತೆ ಪಟ್ಟುಹಿಡಿದರು.

ಈ ಬಗ್ಗೆ ಸದನಕ್ಕೆ ಉತ್ತರ ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಪ್ರಕರಣ ಸ೦ಬ೦ಧ ಈಗಾಗಲೇ 9 ಆರೋಪಿಗಳನ್ನು ಬ೦ಧಿಸಲಾಗಿದೆ. ಸ೦ತ್ರಸ್ತರ ಕುಟು೦ಬಕ್ಕೆ ತಲಾ 4  ಲಕ್ಷ ರು. ಪರಿಹಾರ ನೀಡಲಾಗುವುದು ಎ೦ದು ತಿಳಿಸಿದರು. ಗೃಹ ಸಚಿವರ ಹೇಳಿಕೆಯಿಂದ ತೃಪ್ತರಾಗದ ಬಿಎಸ್ ಪಿ, ತೃಣಮೂಲ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಸದಸ್ಯರು ಇದೇ ಪ್ರಕರಣ  ಸಂಬಂಧ ಚರ್ಚೆಗೆ ಆಗ್ರಹಿಸಿ ನೋಟಿಸ್ ನೀಡಿದ್ದಾರೆ.

ಇಂದು ಮಧ್ಯಾಹ್ನ 2ಕ್ಕೆ ಚರ್ಚೆ
ಇನ್ನು ಉನಾ ದಲಿತರ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಚರ್ಚೆಗೆ ರಾಜ್ಯಸಭೆಯಲ್ಲಿ ವಿಶೇಷ ಕಾಲಾವಕಾಶ ನೀಡಲಾಗಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ಸಮಯ ನಿಗದಿ ಮಾಡಲಾಗಿದೆ.  ನಿನ್ನೆ  ಇಡೀ ದಿನದ ಕಲಾಪವನ್ನು ನುಂಗಿ ಹಾಕಿದ ಉನಾ ಪ್ರಕರಣ ಇಂದು ಕೂಡ ಕಲಾಪವನ್ನು ಬಲಿ ಪಡೆಯುವ ಸಾಧ್ಯತೆ ಇದ್ದು, ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಕೇಂದ್ರ  ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ ಇದೇ ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರದ ವಿರುದ್ಧವೂ ಸದನದಲ್ಲಿ ಭಾರಿ ಚರ್ಚೆ ನಡೆಯುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT