ಕೇರಳದಲ್ಲಿ ಒತ್ತಾಯ ಪೂರ್ವಕ ಮತಾಂತರ (ಸಾಂದರ್ಭಿಕ ಚಿತ್ರ) 
ದೇಶ

ಕೇರಳದಲ್ಲಿ ಒತ್ತಾಯ ಪೂರ್ವಕ ಮತಾಂತರ ಆರೋಪ: ಷಹಾನಾ ಆದ ವಿದ್ಯಾರ್ಥಿನಿ ಅಪರ್ಣಾ!

20 ಯುವಕರ ನಾಪತ್ತೆ ಮತ್ತು ಇಸಿಸ್ ಸೇರ್ಪಡೆ ಊಹಾಪೋಹದ ಮೂಲಕ ಇಡೀ ದೇಶಾದ್ಯಂತ ಸುದ್ದಿಯಾಗಿದ್ದ ದೇವರ ನಾಡು ಕೇರಳ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಒತ್ತಾಯ ಪೂರ್ವಕ ಮತಾಂತರದ ಗಂಭೀರ ಆರೋಪ ಕೇಳಿಬಂದಿದೆ.

ತಿರುವನಂತಪುರಂ: 20 ಯುವಕರ ನಾಪತ್ತೆ ಮತ್ತು ಇಸಿಸ್ ಸೇರ್ಪಡೆ ಊಹಾಪೋಹದ ಮೂಲಕ ಇಡೀ ದೇಶಾದ್ಯಂತ ಸುದ್ದಿಯಾಗಿದ್ದ ದೇವರ ನಾಡು ಕೇರಳ ಇದೀಗ ಮತ್ತೆ ಸುದ್ದಿಯಲ್ಲಿದ್ದು,  ಒತ್ತಾಯ ಪೂರ್ವಕ ಮತಾಂತರದ ಗಂಭೀರ ಆರೋಪ ಕೇಳಿಬಂದಿದೆ.

ಅಪರ್ಣಾ ಎಂಬ ಹಿಂದೂ ಯುವತಿಯೊಬ್ಬಳನ್ನು ಒತ್ತಾಯಪೂರ್ವಕವಾಗಿ ಇಸ್ಲಾಂಗೆ ಮತಾಂತರ ಗೊಳಿಸಲಾಗಿದೆ ಎಂದು ಸ್ವತಃ ಆ ಯುವತಿಯ ತಾಯಿ ದೂರು ನೀಡಿದ್ದಾರೆ. ಮೂಲಗಳ ಪ್ರಕಾರ  ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಅಪರ್ಣಾಳನ್ನು ಒತ್ತಾಯ ಪೂರ್ವಕವಾಗಿ ಇಸ್ಲಾಂಗೆ ಮತಾಂತರಗೊಳಿಸಿದ್ದಾರೆ ಎಂದು ಆ ಯುವತಿಯ ತಾಯಿ ಪೊಲೀಸರಲ್ಲಿ ದೂರು ನೀಡಿದ್ದಾರೆ.  ಅಲ್ಲದೆ ಆಕೆಯ ಹೆಸರನ್ನು ಅಪರ್ಣಾಳ ಬದಲಾಗಿ ಷಹಾನಾ ಎಂದು ಬದಲಿಸಲಾಗಿದೆ ಎಂದು ಮಹಿಳೆ ತಮ್ಮ ದೂರಿನಲ್ಲಿ ದೂರಿದ್ದಾರೆ.

ಮಿನಿ ವಿಜಯನ್ ಎಂಬುವವರು ತಿರುವನಂತಪುರದ ಪಂಗೋಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಮ್ಮ ಪುತ್ರಿ ಅಪರ್ಣಾ ಎರ್ನಾಕುಲಂ ನಲ್ಲಿರುವ ಜುವಲ್ ಶಿಕ್ಷಣ ಸಂಸ್ಥೆಯಲ್ಲಿ  ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್ ನಲ್ಲಿ ತಂಗಿದ್ದಳು. ಇತ್ತೀಚೆಗೆ ಆಕೆಯನ್ನು ಒತ್ತಾಯಪೂರ್ವಕವಾಗಿ ಮತಾಂತರಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.  ಇನ್ನೊಂದು ಆಶ್ಚರ್ಯಕರ ಆಂಶವೆಂದರೆ ಈ ಹಿಂದೆ ಕೇರಳದಿಂದ ನಾಪತ್ತೆಯಾಗಿ ಇಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದ 20 ಯುವಕರ ಪೈಕಿ ಅಪರ್ಣಾ  ಕೂಡ ಒಬ್ಬಳಾಗಿದ್ದಾಳೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ವಾರದ ಹಿಂದಷ್ಟೇ ಇಂತಹುದೇ ಮತ್ತೊಂದು ಪ್ರಕರಣ ದಾಖಲಾಗಿತ್ತು. ನಿಮಿಷ ಎಂಬ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೋರ್ವ ಪ್ರೀತಿಸಿ ಆಕೆಯನ್ನು ಇಸ್ಲಾಂಗೆ ಮತಾಂತರಿಸಿದ್ದ.  ಬಳಿಕ ಆಕೆಯ ಹೆಸರನ್ನು ಫಾತಿಮಾ ಎಂದು ಬದಲಿಸಿದ್ದ ಎಂದು ಯುವತಿಯ ತಾಯಿ ದೂರು ನೀಡಿದ್ದರು. ಪ್ರಮುಖ ಅಂಶವೆಂದರೆ ಈ ಜೋಡಿ ಕೂಡ ಕೇರಳದಿಂದ ನಾಪತ್ತೆಯಾದ 20  ಮಂದಿಯಲ್ಲಿ ಸೇರಿದೆ ಎಂದು ಹೇಳಲಾಗುತ್ತಿದೆ.

ಪೊಲೀಸ್ ಮೂಲಗಳ ಪ್ರಕಾರ, ಕೇರಳದ ಕಲ್ಲಿಕೋಟೆಯಲ್ಲಿರುವ ಮೂಲಭೂತವಾದಿ ಸಂಸ್ಥೆಯೊಂದು ಮುಸ್ಲಿಮೇತರ ಯುವಕರನ್ನು ಆಕರ್ಷಿಸಿ ಅವರನ್ನು ಇಸ್ಲಾಂಗೆ ಮತಾಂತರಗೊಳಿಸುವ  ಕಾರ್ಯ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ಕೇರಳದ ಕಾಸರಗೋಜು, ಪಾಲಕ್ಕಾಡ್, ಕೊಚ್ಚಿನ್ ಮತ್ತು ತಿರುವನಂತಪುರದ ಸುಮಾರು 20 ಮಂದಿ ಯುವಕರು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಸೇರಿರುವ ಕುರಿತು  ವ್ಯಾಪಕ ಸುದ್ದಿ ಹರಿದಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT