ದೇಶ

ಹಿಂದೂಳಿದ ಜನ ನನ್ನನ್ನು ದೇವತೆಯಂತೆ ಕಾಣುತ್ತಾರೆ: ಮಾಯಾವತಿ

Lingaraj Badiger
ನವದೆಹಲಿ: ಉತ್ತರ ಪ್ರದೇಶ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಲಖನೌನಲ್ಲಿ ಬಿಎಸ್ಪಿ ಕಾರ್ಯಕರ್ತರು ನಡೆಸುತ್ತಿರುವ ಭಾರೀ ಪ್ರತಿಭಟನೆಯನ್ನು ಪಕ್ಷದ ವರಿಷ್ಠೆ ಮಾಯಾವತಿ ಬಲವಾಗಿ ಸಮರ್ಥಿಸಿಕೊಂಡಿದ್ದು, ಹಿಂದೂಳಿದ ವರ್ಗದ ಜನತೆ ನನ್ನನ್ನು ದೇವತೆಯಂತೆ ಕಾಣುತ್ತಾರೆ ಎಂದು ಗುರುವಾರ ಹೇಳಿದ್ದಾರೆ,
ಬಿಎಸ್ಪಿ ಪ್ರತಿಭಟನೆ ಬಗ್ಗೆ ದೆಹಲಿಯಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಮಾಯಾವತಿ, ಬಿಜೆಪಿ ಮುಖಂಡನ ಕೀಳುಮಟ್ಟದ ಹೇಳಿಕೆ ವಿರುದ್ಧದ ದಲಿತರ ಪ್ರತಿಭಟನೆಯ ಶಕ್ತಿ ಇದಾಗಿದೆ. ಹಿಂದೂಳಿದ ವರ್ಗದ ಜನತೆ ನನ್ನನ್ನು ದೇವತೆ ರೀತಿ ಕಾಣುತ್ತಾರೆ. ಹಾಗಾಗಿ ದಯಾಶಂಕರ್ ವಿರುದ್ಧ ಕೇಸ್ ದಾಖಲಿಸಿ, ಈ ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ದಯಾಶಂಕರ್ ಅವರನ್ನು ಪಕ್ಷದ ಹುದ್ದೆಗಳಿಂದ ವಜಾಗೊಳಿಸಿದರೆ ಸಾಕಾಗುವುದಿಲ್ಲ. ಅದು ಔಪಚಾರಿಕ ಅಷ್ಟೆ. ಆದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಬಿಎಸ್ಪಿ ನಾಯಕ ಒತ್ತಾಯಿಸಿದ್ದಾರೆ.
ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ್ದಕ್ಕೆ ದಯಾಶಂಕರ್ ಅವರನ್ನು ಈಗಾಗಲೇ ಬಿಜೆಪಿ, ಉತ್ತರ ಪ್ರದೇಶ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ಇತರೆ ಎಲ್ಲಾ ಹುದ್ದೆಗಳಿಂದಲೂ ವಜಾಗೊಳಿಸಿದೆ.
ಮಾಯಾವತಿ ಅವರು ಪಕ್ಷದ ಟಿಕೆಟ್ ಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದು, ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಟಿಕೆಟ್ ನೀಡುತ್ತಾರೆ. ಅವರು ಒಬ್ಬ ವೇಶ್ಯಗಿಂತಲೂ ಕಡೆ ಎಂದು ದಯಾಶಂಕರ್ ಸಿಂಗ್ ಹೇಳಿದ್ದರು. ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು.
SCROLL FOR NEXT