ಹೈದರಾಬಾದ್: ತೆಲಂಗಾಣದ ಬೃಹತ್ ಕೈಗಾರಿಕಾ ಸಚಿವ ಜೂಪಲ್ಲಿ ಕೃಷ್ಣಾರಾವ್ ಅವರ ನಿವಾಸದಿಂದ ನಾಲ್ಕೂವರೆ ವರ್ಷದ ಹೆಣ್ಣು ಮಗು ನಿಗೂಢವಾಗಿ ನಾಪತ್ತೆಯಾಗಿದೆ. ಹೈದರ್ ದುರ್ಗದ ನಾರಾಯಗುಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶಾಸಕರ ಕ್ವಾಟ್ರಸ್ ನಲ್ಲಿ ಈ ಘಟನೆ ಸಂಭವಿಸಿದೆ.
ಶಾಸಕರ ಮನೆಯ ವಾಚ್ ಮನ್ ನ ಮಗಳು ನಾಪತ್ತೆಯಾಗಿರುವ ಬಾಲಕಿ. ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಚಾಕಲೇಟ್ ತರಲು ಹೋದ ಬಾಲಕಿ ಮನೆಯಿಂದ ಹೊರಟ ಬಾಲಕಿ ಸಂಜೆಯಾದರೂ ವಾಪಸ್ ಬರಲಿಲ್ಲ. ಸುತ್ತ ಮುತ್ತ ಹುಡುಕಿದರೂ ಪ್ರಯೋಜನವಾಗಲಿಲ್ಲ, ಸಂಜೆಯವರೆಗೂ ಹುಡುಕಾಡಿದ ದಂಪತಿ ನಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.