ದೆಹಲಿ: 62 ವರ್ಷದ ವ್ಯಕ್ತಿಯನ್ನು ಬಂಧಿಸುವುದರ ಮೂಲಕ ದೆಹಲಿ ಪೊಲೀಸರು ಹೈ ಪ್ರೊಫೈಲ್ ರಾಕೆಟ್ ನಡೆಸುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ.
ದೆಹಲಿಯ ಸಪ್ದರ್ ಜಂಗ್ ಪ್ರದೇಶದಲ್ಲಿ ನಡೆಯುತ್ತಿದ್ದ ಹೈ-ಪ್ರೊಫೈಲ್ ಸೆಕ್ಸ್ ರಾಕೆಟ್‌ನಲ್ಲಿ ತೊಡಗಿದ್ದ 63 ವರ್ಷ ವಯಸ್ಸಿನ ಪಿತೀಂದ್ರ ನಾಥ್ ಸಾನ್ಯಾಯಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 2 ರಂದು ಆದಾಯ ತೆರಿಗೆ ಅಧಿಕಾರಿಗಳು ಸಾನ್ಯಾಲ್ ನಿವಾಸದ ಮೇಲೆ ದಾಳಿ ನಡೆಸಿದಾಗ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಆತ ಭಾಗಿಯಾಗಿರುವುದನ್ನು ಸೂಚಿಸುವ ಅನೇಕ ದಾಖಲೆಗಳು ಸಿಕ್ಕಿವೆ, ಜೊತೆಗೆ 23 ವರ್ಷದ ವಿದೇಶಿ ಯುವತಿ ಪತ್ತೆಯಾಗಿದ್ದಳು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇಂಪೋರ್ಟ್-ಎಕ್ಸ್‌ಪೋರ್ಟ್ ವಹಿವಾಟು ನಡೆಸುತ್ತಿದ್ದ ಆರೋಪಿ ಸನಿಯಾಲ್ ಅನೇಕ ಫೋರ್ಜರಿ ಪ್ರಕರಣಗಳಲ್ಲಿ ಕೂಡಾ ಭಾಗಿಯಾಗಿದ್ದಾನೆ. ಸಂಸದರ ನಕಲಿ ದಾಖಲೆಗಳನ್ನು ಸೃಷ್ಟಿಸುವುದು, ನಕಲಿ ಸಹಿ ಮಾಡುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರೋಪಿ ಸನಿಯಾಲ್ ಮನೆಯ ಮೇಲೆ ದಾಳಿ ಮಾಡಿದಾಗ ಅನೇಕ ಸಂಸದರ ಲೆಟರ್‌ಹೆಡ್‌ಗಳು ಪತ್ತೆಯಾಗಿವೆ. ಇದೀಗ ಪ್ರಕರಣವನ್ನು ಅಪರಾಧ ಪತ್ತೆ ದಳಕ್ಕೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾನೊಬ್ಬ ಸಂಸದನಂತೆ ಎಲ್ಲರ ಮುಂದೆ ಪೋಸ್ ಕೊಡುತ್ತಿದ್ದ ಸಾನ್ಯಾಲ್ ದೂರವಾಣಿ ಕರೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಇನ್ನೂ ಆತನ ಮನೆಯಲ್ಲಿ ಪತ್ತೆಯಾದ ವಿದೇಶಿ ಯುವತಿ ಹೇಳಿಕೆ ನೀಡಿದ್ದು, ಬಲವಂತವಾಗಿ ನನ್ನನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾಳೆ. ಇನ್ನೂ ,ಸಾನ್ಯಾಲ್ ಮಾನವ ಕಳ್ಳ ಸಾಗಣೆಯಲ್ಲೂ ತೊಡಗಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ.