ತಮ್ಮ ಹೆಸರು ಬದಲಾಯಿಸಬಹುದೆಂದು ರೇಷನ್ ಕಾರ್ಡನ್ನು ತೋರಿಸುತ್ತಿರುವ ಕರೂರು ಗ್ರಾಮಸ್ಥರು.
ನಾಗಪಟ್ಟಿಣಂ/ಕರೂರು: ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸದ್ದನ್ನು ವಿರೋಧಿಸಿ ವೇದರಣ್ಯಂ ಮತ್ತು ಕರೂರಿನ ಸುಮಾರು 250 ದಲಿತ ಕುಟುಂಬಗಳು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುವುದಾಗಿ ಬೆದರಿಕೆ ಹಾಕಿದ್ದಾರೆ.
ವೇದಾರಣ್ಯಂನ ಹತ್ತಿರ ಕಳ್ಳಿಮೇಡು ಎಂಬಲ್ಲಿ ಸುಮಾರು 200 ದಲಿತ ಕುಟುಂಬಗಳು, ತಮಗೆ ದೇವಸ್ಥಾನದ ಹಬ್ಬಗಳನ್ನು ಆಚರಿಸುವ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಕರೂರಿನ ಮಲೈಕೊವಿಲೂರಿನ ಹತ್ತಿರ ನಾಗಂಪಲ್ಲಿ ಎಂಬಲ್ಲಿ 35ಕ್ಕೂ ಹೆಚ್ಚು ದಲಿತ ಕುಟುಂಬಗಳು ತಮ್ಮ ಮನೆ ಹತ್ತಿರವಿರುವ ಮಹಾಶಕ್ತಿ ಅಮ್ಮನ್ ದೇವಸ್ಥಾನಕ್ಕೆ ಪ್ರವೇಶಿಸ ನಿರಾಕರಿಸಲಾಗಿದೆ. ಈ ದೇವಾಲಯವನ್ನು ಕಟ್ಟಲು ನಾವು ಕೂಡ ಸಹಾಯ ಮಾಡಿದ್ದೇವೆ ಎನ್ನುತ್ತಾರೆ ಅವರು.
ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿರುವುದರಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಲು ಬಯಸಿದ್ದಾರೆ. ಇವರನ್ನು ಸಂಪರ್ಕಿಸಿರುವ ಕೆಲ ಬಲಪಂಥೀಯ ಸಂಘಟನೆಗಳು ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.