ದೇಶ

ಕೆಲಸದಲ್ಲಿ ಕಳಪೆ ನಿರ್ವಹಣೆ ತೋರುವ ನೌಕರರಿಗೆ ಇನ್ ಕ್ರಿಮೆಂಟ್ ಕಟ್

Shilpa D

ನವದೆಹಲಿ: ಕೆಲಸದಲ್ಲಿ ಕಳಪೆ ನಿರ್ವಹಣೆ ತೋರುವ ಕೇಂದ್ರ ಸರ್ಕಾರಿ ನೌಕರರಿಗೆ ಯಾವುದೇ ಇನ್ ಕ್ರಿಮೆಂಟ್ ಮತ್ತು ಬಡ್ತಿ ನೀಡಲಾಗುವುದಿಲ್ಲ ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ.

7ನೇ ವೇತನ ಆಯೋಗದ ಶಿಫಾರಸಿನನ್ವಯ ಈ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ನೌಕರರ ಕಾರ್ಯ ನಿರ್ವಹಣೆಯನ್ನು ವಿಶ್ಲೇಷಣೆಗೆ ಒಳಪಡಿಸಿ ಅವರಿಗೆ ಶ್ರೇಣಿ ನೀಡಲಾಗುವುದು. ಅದರಂತೆ ಅವರಿಗೆ ವೇತನ ಮತ್ತು ಭತ್ಯೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಮಾಡಿಫೈಯಿಡ್ ಅಶ್ಯೂರ್ಡ್ ಕೆರಿಯರ್ ಪ್ರೋಗ್ರೆಷನ್ (ಎಂಎಸಿಪಿ) ಯೋಜನೆಯನ್ವಯ ಮೊದಲ 20 ವರ್ಷಗಳ ಸೇವಾವಧಿಯಲ್ಲಿ ಯಾವುದೇ ನೌಕರ ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸದಿದ್ದರೆ ಅವರ ವಾರ್ಷಿಕ ವೇತನ ಹೆಚ್ಚಳವನ್ನು ತಡೆ ಹಿಡಿಯಲಾಗುವುದು. ಜತೆಗೆ ಬಡ್ತಿಯನ್ನೂ ಸಹ ತಡೆ ಹಿಡಿಯಲಾಗುವುದು ಎಂದು ಹಣಕಾಸು ಸಚಿವಾಲಯ ಸೂಚಿಸಿದೆ.

SCROLL FOR NEXT