ಕಾರ್ಗಿಲ್ ಯುದ್ಧ ಗೆದ್ದ ಸಂಭ್ರಮ ಆಚರಿಸಿದ್ದ ಯೋಧರು 
ದೇಶ

ಕಾರ್ಗಿಲ್ ಯುದ್ಧದ ಬಗ್ಗೆ ನೀವು ತಿಳಿದಿರಬೇಕಾದ ವಿಷಯಗಳು

ಕಾರ್ಗಿಲ್ ಯುದ್ಧ ನಡೆದು ಇಂದಿಗೆ 17 ವರ್ಷ. ಭಾರತ ಮತ್ತು ಪಾಕಿಸ್ತಾನ ನಡುವೆ ಲಡಾಕ್ ನ ಕಾರ್ಗಿಲ್ ನಲ್ಲಿ ನಡೆದ ಯುದ್ಧವೇ...

ಕಾರ್ಗಿಲ್ ಯುದ್ಧ ನಡೆದು ಇಂದಿಗೆ 17 ವರ್ಷ. ಭಾರತ ಮತ್ತು ಪಾಕಿಸ್ತಾನ ನಡುವೆ ಲಡಾಕ್ ನ ಕಾರ್ಗಿಲ್ ನಲ್ಲಿ ನಡೆದ ಯುದ್ಧವೇ ಕಾರ್ಗಿಲ್ ಯುದ್ಧ. ಮಿಲಿಟರಿ, ರಾಜಕೀಯ ಮತ್ತು ರಾಜತಾಂತ್ರಿಕ ಗೆಲುವು ಸಿಕ್ಕಿದ ದಿನ. ಯುದ್ಧದಲ್ಲಿ ತಮ್ಮ ಪ್ರಾಣತೆತ್ತ ಯೋಧರನ್ನು ಸ್ಮರಿಸುವ ದಿನ ಜುಲೈ 26ರ ಕಾರ್ಗಿಲ್ ವಿಜಯ ದಿವಸ.
ಕಾರ್ಗಿಲ್ ಯುದ್ಧದ ಪ್ರಮುಖಾಂಶಗಳು:
1999ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಲಡಾಕ್ ನ( ಹಿಂದಿನ ಬಲ್ತಿಸ್ತಾನ್ ಜಿಲ್ಲೆ) ಕಾರ್ಗಿಲ್ ನಲ್ಲಿ ನಡೆದ ಯುದ್ಧ. ಇದು ಮೊದಲ ಕಾಶ್ಮೀರ ಯುದ್ಧದ ನಂತರ ಗಡಿ ನಿಯಂತ್ರಣ ರೇಖೆಯಿಂದ ಪ್ರತ್ಯೇಕಿಸಲಾಯಿತು.
1971ರಲ್ಲಿ ಯುದ್ಧ ನಡೆದು ಬಾಂಗ್ಲಾದೇಶ ರಚನೆಯಾದ ನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಮೊದಲ ಕದನ ಕಾರ್ಗಿಲ್ ಆಗಿದೆ. ಈ ಯುದ್ಧ ನಡೆದ ವರ್ಷ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರದಲ್ಲಿತ್ತು.
ಭಾರತಕ್ಕೆ ಸೇರಿದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಯೋಧರು ಮತ್ತು ಕಾಶ್ಮೀರಿ ಉಗ್ರಗಾಮಿಗಳು ಒಳನುಸುಳದಂತೆ ಮಾಡಲು ಕಾರ್ಗಿಲ್ ವಲಯದಲ್ಲಿ ಭಾರತ ಆಪರೇಷನ್ ವಿಜಯ್ ಅನ್ನು ಆರಂಭಿಸಿತು.
ಎರಡೂ ದೇಶಗಳ ಗಡಿಯಲ್ಲಿ ಯಾವುದೇ ಶಸ್ತಾಸ್ತ್ರ ಯುದ್ಧ ನಡೆಯದಂತೆ ಶಿಮ್ಲಾ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿದರೂ ಕೂಡ ಈ ಯುದ್ಧ ನಡೆಯಿತು. ಭಾರತ ಮತ್ತು ಪಾಕಿಸ್ತಾನ ಸೇನಾಯೋಧರು 1999ರಲ್ಲಿ ಮೇಯಿಂದ ಜೂನ್ ತಿಂಗಳವರೆಗೆ ಕಾರ್ಗಿಲ್ ನಲ್ಲಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿ ಯುದ್ಧ ಮಾಡಿದರು.
ಸಫೇದ್ ಸಾಗರ್ ಹೆಸರಿನಲ್ಲಿ ಭಾರತೀಯ ವಾಯುಪಡೆಯ ಕಾರ್ಯಾಚರಣೆ ಕಾರ್ಗಿಲ್ ಯುದ್ಧದ ಮುಖ್ಯ ಭಾಗವಾಗಿತ್ತು. ಮೊದಲ ಬಾರಿಗೆ ಭೂಮಿಯಿಂದ 32 ಸಾವಿರ ಅಡಿ ಎತ್ತರದಲ್ಲಿ ವಾಯುಶಕ್ತಿಯನ್ನು ಬಳಸಿತ್ತು. ಕೇವಲ ಒಂದು ವಾರದ ತರಬೇತಿ ಪಡೆದು ಭಾರತದ ಯುದ್ಧ ಪೈಲಟ್ ಗಳು, ಇಂಜಿನಿಯರ್ ಗಳು ಯುದ್ಧದಲ್ಲಿ ತಮ್ಮ ಸಾಮರ್ಥ್ಯ ಮೀರಿ ದೇಶಕ್ಕಾಗಿ ಹೋರಾಡಿದ್ದರು.ಪಾಕಿಸ್ತಾನ ಪಡೆಯನ್ನು ಗುರುತಿಸುವುದರಿಂದ ಹಿಡಿದು ಮುಜಾಹಿದ್ದೀನ್ ನನ್ನು ನಿಷೇಧಿಸುವ ಕೆಲಸವನ್ನು ಮಾಡಿತ್ತು.
ಪಾಕಿಸ್ತಾನ ವಿರುದ್ಧ ಜಯ: ಅಂದು 1999ರ ಜುಲೈ ತಿಂಗಳಲ್ಲಿ ಭಾರತೀಯ ಯೋಧರು ಪಾಕಿಸ್ತಾನ ಸೇನೆ ಜೊತೆ ಹೋರಾಡುತ್ತಿದ್ದ ಸಂದರ್ಭದಲ್ಲಿ ಜುಲೈ 14ರಂದು ಕಾರ್ಯಾಚರಣೆ ಯಶಸ್ವಿ ಎಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಘೋಷಿಸಿದರು. ಎರಡೂ ದೇಶಗಳ ನಡುವಿನ ಯುದ್ಧ ಅಧಿಕೃತವಾಗಿ ಕೊನೆಗೊಂಡದ್ದು ಜುಲೈ 26, 1999ರಂದು.
ನೂರಾರು ಯೋಧರ ಸಾವು: ಭಾರತದ 500ಕ್ಕೂ ಹೆಚ್ಚು ಮಿಲಿಟರಿ ಯೋಧರು ವೀರ ಮರಣವನ್ನಪ್ಪಿದರೆ, ಪಾಕಿಸ್ತಾನದ 3 ಸಾವಿರಕ್ಕೂ ಹೆಚ್ಚು ಯೋಧರು ಅಸುನೀಗಿದ್ದರು. ಮುಜಾಹಿದ್ದೀನ್ ಸಂಘಟನೆಯವರು ಮತ್ತು ಒಳನುಸುಳುಕೋರರು ಮೃತಪಟ್ಟರು.
ಕಾರ್ಗಿಲ್ ವಿಜಯದ ಸ್ಮರಣಾರ್ಥ ದ್ರಾಸ್ ನಲ್ಲಿ ಕಾರ್ಗಿಲ್ ಯುದ್ಧ ಸ್ಮಾರಕ ಗೋಡೆ ನಿರ್ಮಿಸಲಾಗಿದ್ದು, ಅದರಲ್ಲಿ ಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ಹೆಸರುಗಳನ್ನು ಬರೆಯಲಾಗಿದೆ. ಸ್ಮಾರಕದಲ್ಲಿ ಕಾರ್ಗಿಲ್ ನ ಯುದ್ಧದಲ್ಲಿ ಭಾಗವಹಿಸಿದ ಭಾರತೀಯ ಸೈನಿಕರ ದಾಖಲೆಗಳು ಮತ್ತು ಚಿತ್ರಗಳು, ಸಂಗ್ರಹಾಲಯ ಮತ್ತು ದಾಖಲೆಗಳಿವೆ. 
ಪರ್ವತ ಪ್ರದೇಶದಲ್ಲಿ ನಡೆದ ಭೀಕರ ಯುದ್ಧ ಕಾರ್ಗಿಲ್ ಕದನವಾಗಿದೆ. ಕಡಿದಾದ ಭೂಪ್ರದೇಶ ಮತ್ತು ಸ್ವಾಭಾವಿಕ ಜೀವಿಗಳ ಕಾರಣದಿಂದ ಇಂತಹ ಯುದ್ಧ ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಎರಡು ಪರಮಾಣು ರಾಷ್ಟ್ರಗಳ ನಡುವೆ ನಡೆದ ಯುದ್ಧ ಇದಾಗಿದೆ. ಈ ಯುದ್ಧದ ನೇರ ಪ್ರಸಾರವನ್ನು ಮಾಧ್ಯಮಗಳು ವಿಸ್ತಾರವಾಗಿ ದೇಶದ ಜನತೆಗೆ ತೋರಿಸಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ನಕಾರ; 'ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿಲ್ಲ': ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಪಾಕಿಸ್ತಾನ!

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

ಪೆಟ್ರೋಲ್ ದರ ಏರಿಕೆ, ದೇಶಾದ್ಯಂತ ವ್ಯಾಪಕ ಪ್ರತಿಭಟನೆ; ಬೆಚ್ಚಿಬಿದ್ದ Pak ಸರ್ಕಾರ, ಲೀಟರ್ ಗೆ 80 ರೂ ಗಳಷ್ಟು ಬೆಲೆ ಕಡಿತ!

Hubli Love jihad case: ವಿಡಿಯೋ ಇರೋದು ನಿಜ, ಆದ್ರೆ… ಪ್ರಜ್ಞೆ ತಪ್ಪಿದ್ದರೆ ವಿಡಿಯೋದಲ್ಲಿ ಹೇಗೆ ಆ್ಯಕ್ಟಿವ್ ಆಗಿರುತ್ತಾಳೆ?: Sameer Mulla ಸ್ಫೋಟಕ ಹೇಳಿಕೆ!

SCROLL FOR NEXT