ದಲಿತ ಯುವಕರನ್ನು ವಾಹನಕ್ಕೆ ಕಟ್ಟಿಹಾಕಿ ಥಳಿಸಿದ್ದನ್ನು ಮೊಬೈಲ್ ನಲ್ಲಿ ಸೆರೆಹಿಡಿದ ಚಿತ್ರ 
ದೇಶ

ಉನಾದಲ್ಲಿ ಹಸುಗಳನ್ನು ಕೊಂದಿದ್ದು ಸಿಂಹಗಳು, ದಲಿತರಲ್ಲ : ಗುಜರಾತ್ ಸಿಐಡಿ ವರದಿ

ಗುಜರಾತ್ ನ ಗಿರ್ ಸೋಮನಾಥ್ ಜಿಲ್ಲೆಯ ಉನಾ ಪಟ್ಟಣದಲ್ಲಿ ದಲಿತರ ಮೇಲೆ ಹಸುವಿನ ರಕ್ಷಕರು ದೌರ್ಜನ್ಯ ನಡೆಸಿದ ಘಟನೆ ಬಗ್ಗೆ ತನಿಖೆ...

ಅಹಮದಾಬಾದ್: ಗುಜರಾತ್ ನ ಗಿರ್ ಸೋಮನಾಥ್ ಜಿಲ್ಲೆಯ ಉನಾ ಪಟ್ಟಣದಲ್ಲಿ ದಲಿತರ ಮೇಲೆ ಹಸುವಿನ ರಕ್ಷಕರು ದೌರ್ಜನ್ಯ ನಡೆಸಿದ ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಹಸುಗಳನ್ನು ಸಿಂಹಗಳು ಕೊಂದುಹಾಕಿವೆ ಎಂದು ಹೇಳಿದ್ದಾರೆ.
ಉನಾ ತಾಲ್ಲೂಕಿನ ಮೊಟ ಸಮಾದಿಯಾಲ ಗ್ರಾಮದಲ್ಲಿ ದಲಿ ತರನ್ನು ಗೋ ರಕ್ಷಕರು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಅಪರಾಧ ಪೊಲೀಸರು, ಹಸುಗಳನ್ನು ಜುಲೈ 10 ಮತ್ತು 11ರಂದು ಸಿಂಹಗಳು ಕೊಂದುಹಾಕಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಸಿಐಡಿ ಮಹಾ ನಿರ್ದೇಶಕ ಎಸ್.ಎಸ್.ತ್ರಿವೇದಿ, ಸಿಂಹಗಳು ನಾಲ್ಕು ಹಸುಗಳನ್ನು ಕೊಂದು ಹಾಕಿವೆ ಎಂದು ತಿಳಿಸಿದ್ದಾರೆ.
ನಮ್ಮ ತನಿಖೆ ಸಂದರ್ಭದಲ್ಲಿ, ಸಿಂಹಗಳು ಮೊಟ ಸಮದಿಯಾಲಾ ಹತ್ತಿರ ಬೆಡಿಯಾ ಗ್ರಾಮದಲ್ಲಿ ಹಸುವೊಂದನ್ನು ಕೊಂದು ಹಾಕಿವೆ. ಅದರ ಸುತ್ತಮುತ್ತಲ ಗ್ರಾಮದಲ್ಲಿ ಮತ್ತೆ ಮೂರು ಹಸುಗಳನ್ನು ಕೊಂದಿವೆ. ಬೆಳಗ್ಗೆ ವಿಷಯ ಗಮನಕ್ಕೆ ಬಂದಾಗ ದಲಿತರಲ್ಲಿ ಹಸುಗಳ ಅವಶೇಷಗಳನ್ನು ಮಣ್ಣು ಮಾಡಲು ಹೇಳಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ತಿಳಿದುಬಂದಿದೆ ಎಂದು ತ್ರಿವೇದಿ ತಿಳಿಸಿದ್ದಾರೆ. 
ಸಿಂಹಗಳು ಕೊಂದುಹಾಕಿದ ಹಸುಗಳ ಚರ್ಮ ಸುಲಿಯುತ್ತಿರುವಾಗ ಗೋ ರಕ್ಷಕರನ್ನು ಸ್ಥಳಕ್ಕೆ ಯಾರು ಕರೆದರು ಮತ್ತು ಅವರಿಗೆ ತಪ್ಪು ಮಾಹಿತಿ ಯಾರು ಏಕೆ ಕೊಟ್ಟರು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎನ್ನುತ್ತಾರೆ ಸಿಐಡಿ ಪೊಲೀಸರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್