ನರೇಶ್ ಯಾದವ್ 
ದೇಶ

ಆಪ್ ಶಾಸಕ ನರೇಶ್‌ ಯಾದವ್‌ ಗೆ ಜಾಮೀನು

ಕುರಾನ್‌ ಅಪವಿತ್ರಗೊಳಿಸಿದ ಆರೋಪದ ಮೇಲೆ ಜೈಲು ಪಾಲಾಗಿದ್ದ ಆಪ್‌ ಶಾಸಕ ನರೇಶ್‌ ಯಾದವ್‌ ಅವರಿಗೆ ಸ್ಥಳೀ ಕೋರ್ಟ್ ಶನಿವಾರ...

ಸಂಗ್ರುರ್: ಕುರಾನ್‌ ಅಪವಿತ್ರಗೊಳಿಸಿದ ಆರೋಪದ ಮೇಲೆ ಜೈಲು ಪಾಲಾಗಿದ್ದ ಆಪ್‌ ಶಾಸಕ ನರೇಶ್‌ ಯಾದವ್‌ ಅವರಿಗೆ ಸ್ಥಳೀ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.
ನರೇಶ್ ಯಾದವ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧಿಶ ಎ.ಎಸ್.ವಿರ್ಕ್ ಅವರು ಜಾಮೀನು ಮಂಜೂರು ಮಾಡಿದ್ದಾರೆ ಎಂದು ಎಎಪಿ ಕಾನೂನು ಘಟಕದ ಮುಖ್ಯಸ್ಥ ಹಿಮ್ಮತ್ ಸಿಂಗ್ ಶೆರ್ಗಿಲ್ ಅವರು ಹೇಳಿದ್ದಾರೆ.
ಜೂನ್‌ 24ರಂದು ನಡೆದ ಕುರಾನ್‌ ದಹನ ಪ್ರಕರಣ ಸಂಬಂಧ ಕಳೆದ ಭಾನುವಾರ ನರೇಶ್ ಯಾದವ್ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು  ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತ್ತು.
ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆಯಲಾಗಿರುವ ಪ್ರಮುಖ ಆರೋಪಿ ವಿಜಯ್‌ ಕುಮಾರ್‌ ಎಂಬಾತ ವಿಚಾರಣೆ ವೇಳೆ ನರೇಶ್‌ ಯಾದವ್‌ ಅವರ ಅಣತಿಯಂತೆ ನಾನು ಕುರಾನ್‌ ನನ್ನು ಹರಿದಿ¨ªೆ ಎಂದು ಮಾಹಿತಿ ನೀಡಿರುವ ಕಾರಣ ಪೊಲೀಸರು ಆಪ್ ಶಾಸಕನ ವಿರುದ್ಧವೂ ಎಫ್ಐಆರ್‌ ದಾಖಲಿಸಿಕೊಂಡಿದ್ದರು. 
"ಈ ಕೃತ್ಯ ಎಸಗಲು ನನಗೆ 1 ಕೋಟಿ ರುಪಾಯಿ ಆಮಿಷ ಒಡ್ಡಲಾಗಿತ್ತು. ದೀನಾನಗರ್‌ ಮತ್ತು ಪಠಾಣ್‌ಕೋಟ್‌ ದಾಳಿಯ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಲಾಗಿದ್ದು, ನಾವು ಪಾಕಿಸ್ಥಾನ ಮತ್ತು ಮುಸ್ಲಿಂ ವಿರೋಧಿಗಳು' ಎಂದು ವಿಜಯ್‌ ಕುಮಾರ್‌ ಹೇಳಿಕೆ ನೀಡಿದ್ದ. ಬಳಿಕ ನ್ಯಾಯಾಲಯವು ಯಾದವ್‌ ವಿರುದ್ಧ ಬಂಧನದ ವಾರಂಟ್‌ ಜಾರಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ