ಗುರುಗಾಂವ್ ನಲ್ಲಿ ಟ್ರಾಫಿಕ್ ಜಾಮ್ (ಸಂಗ್ರಹ ಚಿತ್ರ) 
ದೇಶ

ಗುರಗಾಂವ್ ಟ್ರಾಫಿಕ್ ಜಾಮ್ ಗೆ ಪೊಲೀಸ್ ಆಯುಕ್ತರ ತಲೆದಂಡ; ರೋಹ್ಟಕ್ ಗೆ ವರ್ಗಾವಣೆ

ಮಳೆಯಿಂದಾಗಿ ರಾಜಧಾನಿ ದೆಹಲಿ-ಗುರಗಾಂವ್ ಹೆದ್ದಾರಿಯಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ಪ್ರಕರಣ ಪೊಲೀಸ್ ಆಯುಕ್ತರ ತಲೆದಂಡಕ್ಕೆ ಕಾರಣವಾಗಿದ್ದು, ಕರ್ತವ್ಯಲೋಪದ ಮೇರೆಗೆ ಆಯುಕ್ತ ನವದೀಪ್ ವಿರ್ಕ್ ರನ್ನು ವರ್ಗಾವಣೆ ಮಾಡಲಾಗಿದೆ.

ಗುರಗಾಂವ್: ಮಳೆಯಿಂದಾಗಿ ರಾಜಧಾನಿ ದೆಹಲಿ-ಗುರಗಾಂವ್ ಹೆದ್ದಾರಿಯಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ಪ್ರಕರಣ ಪೊಲೀಸ್ ಆಯುಕ್ತರ ತಲೆದಂಡಕ್ಕೆ ಕಾರಣವಾಗಿದ್ದು, ಕರ್ತವ್ಯಲೋಪದ  ಮೇರೆಗೆ ಆಯುಕ್ತ ನವದೀಪ್ ವಿರ್ಕ್ ರನ್ನು ವರ್ಗಾವಣೆ ಮಾಡಲಾಗಿದೆ.
ಗುರಗಾಂವ್-ದೆಹಲಿ-ಜೈಪುರ ಹೆದ್ದಾರಿಯಲ್ಲಿ ನಿನ್ನೆ ಸಂಭವಿಸಿದ್ದ ಭಾರಿ ಟ್ರಾಫಿಕ್ ಜಾಮ್ ನಿರ್ವಹಣೆಯಲ್ಲಿ ಗುರಗಾಂವ್ ಪೊಲೀಸರು ವಿಫಲವಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ಆಯುಕ್ತ  ಸಿಪಿ ನವದೀಪ್ ವಿರ್ಕ್ ರನ್ನು ರೋಹ್ಟಕ್ ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ ಗುರಗಾಂವ್ ನ ನೂತನ ಆಯುಕ್ತರನ್ನಾಗಿ ಸಂದೀಪ್ ಖಿರವಾರ್ ಅವರನ್ನು ನೇಮಿಸಲಾಗಿದೆ. ಇನ್ನು ಟ್ರಾಫಿಕ್ ಜಾಮ್ ಕುರಿತಂತೆ ಪೊಲೀಸರ ಲೋಪ ಒಪ್ಪಿಕೊಂಡಿರುವ ಆಯುಕ್ತ ನವದೀಪ್ ಅವರು, ಟ್ರಾಫಿಕ್ ನಿರ್ವಹಣೆಯಲ್ಲಿ ನಾವು ಕೊಂಚ ತಡ ಮಾಡಿದೆವು ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಗುರಗಾಂವ್ ನಲ್ಲಿ ಗುರುವಾರದಿಂದ ಸತತ ಮೂರು ದಿನ ಸುರಿದ ಭಾರಿ ಮಳೆಯಿಂದಾಗಿ ಗುರುಗ್ರಾಮದಲ್ಲಿ 15 -20ಕಿ.ಮೀ. ಉದ್ದದ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು,  ನೌಕರರು, ಪ್ರಮುಖವಾಗಿ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಟ್ರಾಫಿಕ್ ಜಾಮ್ ಹಾಗೂ ಗುರಗಾಂವ್ ಪೊಲೀಸರ ಲೋಪದಿಂದ ಕೂಡಿದ ನಿರ್ವಹಣೆ ಸಾಮಾಜಿಕ  ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. 
ಸ್ವತಃ ಗುರುಗಾಂವ್ ಪೊಲೀಸರು ದೆಹಲಿ-ಗುರುಗಾಂವ್ ರಸ್ತೆಯಲ್ಲಿ ಪ್ರಯಾಣ ಮುಂದೂಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!