ಕಣ್ಮರೆಯಾದ ಎಎನ್ -32 ವಿಮಾನ( ಫೋಟೋ ಕೃಪೆ-ಭಾರತೀಯ ವಾಯುಪಡೆ) 
ದೇಶ

ನಾಪತ್ತೆಯಾದ ಎಎನ್-32 ವಿಮಾನ ಪತ್ತೆಗೆ ಅಮೆರಿಕ ಉಪಗ್ರಹದ ನೆರವು ಕೋರಿದ ಭಾರತ

ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ಸಾಗಾಣಿಕೆ ವಿಮಾನ ಕಣ್ಮರೆಯಾಗಿದ್ದನ್ನು ಹುಡುಕಾಟ ನಡೆಸಲು...

ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ಸಾಗಾಣಿಕೆ ವಿಮಾನ ಕಣ್ಮರೆಯಾಗಿದ್ದನ್ನು ಹುಡುಕಾಟ ನಡೆಸಲು ಅಮೆರಿಕ ಉಪಗ್ರಹದ ಸಹಾಯವನ್ನು ಭಾರತ ಕೇಳಿದ್ದು, ವಿಮಾನವನ್ನು ಸಂಚು ನಡೆಸಿ ನಾಶಗೊಳಿಸಿರುವ ಸಾಧ್ಯತೆಯನ್ನು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಳ್ಳಿಹಾಕಿದ್ದಾರೆ.
ಚೆನ್ನೈಯಿಂದ ಪೋರ್ಟ್ ಬ್ಲೇರ್ ಗೆ ಹೊರಟಿದ್ದ ಎಎನ್-32 ವಿಮಾನ ಬಂಗಾಳಕೊಲ್ಲಿ ಬಳಿ ಕಳೆದ ಶುಕ್ರವಾರ ಕಣ್ಮರೆಯಾಗಿತ್ತು. ಅದರಲ್ಲಿ 29 ಸಿಬ್ಬಂದಿಗಳಿದ್ದರು.
ಇನ್ನೂ ಸುಳಿವಿಲ್ಲ: ವಿಮಾನ ಹುಡುಕಾಟದ ಬೆಳವಣಿಗೆ ಬಗ್ಗೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಪರ್ರಿಕರ್, ಇದುವರೆಗೆ ಭಾರತದ ಸ್ಯಾಟಲೈಟ್ ಒಂದು ಸಿಗ್ನಲ್ ನ್ನು ಕೂಡ ಪಡೆದಿಲ್ಲ. ಹಾಗಾಗಿ ಅಮೆರಿಕದ ರಕ್ಷಣಾ ಪಡೆಯನ್ನು ಸಂಪರ್ಕಿಸಿ ಅವರ ಸ್ಯಾಟಲೈಟ್ ಯಾವುದಾದರೂ ಸಿಗ್ನಲ್ ಪಡೆದಿದ್ದಾರೆಯೇ ಎಂದು ಅಧಿಕಾರಿಗಳು ಕೇಳುತ್ತಿದ್ದಾರೆ. ನಮ್ಮ ಸ್ಯಾಟಲೈಟ್ ಜೊತೆಗೆ ಹುಡುಕಾಟ ನಡೆಸಲು ಅಮೆರಿಕದ ಉಪಗ್ರಹಗಳ ಸಹಾಯವನ್ನು ಕೋರಲಾಗಿದೆ. ನಮ್ಮ ಪ್ರಯತ್ನ ಫಲಕೊಡಬಹುದು ಎಂಬ ನಿರೀಕ್ಷೆಯಿದೆ ಎಂದರು.
ವಿಮಾನ ಸಮರ್ಥವಾಗಿತ್ತು: ಕಾಣೆಯಾದ ವಿಮಾನ ಸಮರ್ಥವಾಗಿತ್ತು. ವಿಮಾನದ ಭಾಗಗಳು ಹಳೆಯದಾಗಿದ್ದರೆ ಹಾರಾಟಕ್ಕೆ ಬಿಡುವುದಿಲ್ಲ. ಮೊದಲ ಕೂಲಂಕಷ ಪರಿಶೀಲನೆ ನಂತರ ವಿಮಾನ 279 ಗಂಟೆಗಳ ಹಾರಾಟ ನಡೆಸಿತ್ತು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸರ್ವೋಚ್ಚ ನಾಯಕನ ಆಯ್ಕೆಗಾಗಿ 88 ಸದಸ್ಯರು ಸೇರಿದ್ದ ಕಟ್ಟಡ ಧ್ವಂಸಗೈದ ಇಸ್ರೇಲ್; 9 ಸಾವಿರ ಕೋಟಿಯ ಅಮೆರಿಕದ ರೇಡಾರ್ ಧ್ವಂಸ!

ಚಿಕ್ಕಬಳ್ಳಾಪುರ: 70 ಸಾವಿರ ಲಂಚ ಪಡೆಯುತ್ತಿದ್ದಾಗ PSI, ASI ಲೋಕಾಯುಕ್ತ ಬಲೆಗೆ

'ತುಂಬಾ ಲೇಟ್ ಆಯಿತು': ಇರಾನ್​ ಮಾತುಕತೆ ಪ್ರಸ್ತಾಪಕ್ಕೆ ಟ್ರಂಪ್ ತಿರುಗೇಟು

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

"ನೀವು ವಾಸಿಸುವ ರಾಷ್ಟ್ರವನ್ನು ಬೆಂಬಲಿಸಿ ಅಥವಾ...": ಇರಾನ್-ಇಸ್ರೇಲ್ ಯುದ್ಧದ ಬೆನ್ನಲ್ಲೇ ಯಜುವೇಂದ್ರ ಚಹಾಲ್ ಪೋಸ್ಟ್ ವೈರಲ್

SCROLL FOR NEXT