ನವದೆಹಲಿ: ಬಾಲಿವುಡ್ ನಟ ಆಮೀರ್ ಖಾನ್ ಅವರ ಅಸಹಿಷ್ಣುಪತೆ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಸಂಸದ ಸುಬ್ರಮಣಿಯನ್ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ತನ್ನ ಹೆಂಡತಿ ದೇಶ ಬಿಟ್ಟು ಹೋಗಿಬಿಡೋಣ ಎಂದು ಹೇಳುತ್ತಾರೆ ಎಂದು ನಟನೊಬ್ಬ ತಿಳಿಸುತ್ತಾರೆ. ಇದು ಉದ್ಧಟತನದ ಹೇಳಿಕೆ, ಮನೆ ಎಷ್ಟೇ ಚಿಕ್ಕದಿದ್ದರೂ ಮನೆ ತೊರೆಯುವ ಮಾತನ್ನಾಡದೆ, ಇರುವ ಜಾಗದಲ್ಲೆ ಬಂಗಲೆ ಕಟ್ಟುವ ಕನಸು ಕಾಣಬೇಕು. ನಾನು ಯಾರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಮಾತನಾಡುವುದಿಲ್ಲ, ಆದರೆ ಅಂತಿಮವಾಗಿ ದೇಶವೇ ಸರ್ವೋಚ್ಚ ಎಂದು ಹೇಳಿದ್ದರು.
ಇದಾದ ನಂತರ ಪರಿಕ್ಕರ್ ಹೇಳಿಕೆಗೆ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದ್ದರು. ಮನೋಹರ್ ಪರಿಕ್ಕರ್ ಹೇಳಿಕೆ ಸಂಬಂಧ ಟ್ವೀಟ್ ಮಾಡಿರುವ ಸಂಸದ ಸುಬ್ರಮಣಿಯನ್ ಸ್ವಾಮಿ, ಆಮೀರ್ ಖಾನ್ ಕುರಿತು ಮಾತನಾಡಿರುವ ಪರಿಕ್ಕರ್ ಹೇಳಿಕೆಗೆ ಅಷ್ಟೊಂದು ತೀವ್ರ ಪ್ರತಿಕ್ರೆಯೆ ನೀಡುವ ಅಗತ್ಯವಿಲ್ಲ, ಜನ್ಮ ಭೂಮಿಯನ್ನು ಪ್ರೀತಿಸುವಲ್ಲಿ ಆಮೀರ್ ಖಾನ್ ಅಜ್ಞಾನಿಯಾಗಿದ್ದರೇ ಅವರಿಗೆ ಒಬ್ಬ ಶಿಕ್ಷಕರ ಅಗತ್ಯವಿದೆ ಎಂದು ಅನಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.