ದೇಶ

ದೂರು ನೀಡಲು ಬಂದವನ ಕೈಯ್ಯಿಂದ ಕಾಲು ಮಸಾಜ್ ಮಾಡಿಸಿಕೊಂಡ ಪೊಲೀಸ್: ವಿಡಿಯೋ ವೈರಲ್

Shilpa D

ಲಕ್ನೋ: ದೂರು ಕೊಡಲು ಠಾಣೆಗೆ ಬಂದ ನಾಗರಿಕನಿಂದ ಠಾಣಾಧಿಕಾರಿ ಕಾಲಿನ ಮಸಾಜ್ ಮಾಡಿಸಿಕೊಂಡ ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಉತ್ತರ ಪ್ರದೇಶ ರಾಜಧಾನಿ ಲಖನೌದ ಮೋಹನ್​ಲಾಲ್​ಗಂಜ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯ ಕಾಲು ಮಸಾಜ್ ಮಾಡಿಸಿಕೊಳ್ಳುವ ದೃಶ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಸಾಜ್ ಮಾಡಿಸಿಕೊಂಡ ಅಧಿಕಾರಿಯನ್ನು ಅಮಾನತುಗೊಳಿಸಿರುವ ಲಖನೌ ಪೊಲೀಸ್ ವರಿಷ್ಠಾಧಿಕಾರಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಠಾಣೆಯ ಇತರ ಸಿಬ್ಬಂದಿ ಇನ್ಸ್​ಪೆಕ್ಟರ್ ಬಳಿಯೆ ನಿಂತಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸಿದೆ. ಮೊದಲು ತಮಾಷೆಗಾಗಿ ಕಾಲೊತ್ತಲು ಹೇಳಿದ್ದಾರೆ ಎಂದುಕೊಂಡಿದ್ದ ವ್ಯಕ್ತಿ ನಂತರ ನಿಜವಾಗಿಯೂ ಮಸಾಜ್ ಮಾಡಲು ಅಧಿಕಾರಿ ಆಗ್ರಹಿಸಿದ್ದರಿಂದ ವಿಧಿಯಿಲ್ಲದೆ ಕಾಲಿನ ಮಸಾಜ್ ಮಾಡಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ಮೊಬೈಲ್ ನಲ್ಲಿ ಯಾರೊಂದಿಗೂ ಸಂಭಾಷಣೆ ನಡೆಸುತ್ತಿದ್ದರು. ವಯಕ್ತಿಕ ಸಮಸ್ಯೆ ಸಂಬಂಧ ಪೊಲೀಸರಿಗೆ ವ್ಯಕ್ತಿ  ದೂರು ನೀಡಲು ಬಂದಿದ್ದರು ಎನ್ನಲಾಗಿದೆ.

SCROLL FOR NEXT