ಅಂಗೂರ್ ಲತಾ ದೇಕಾ 
ದೇಶ

ಶಾಸಕಿ ಕಮ್ ನಟಿ ಅಂಗೂರ್ ಲತಾ ದೇಕಾ ಸಂಸ್ಕೃತದಲ್ಲಿ ಪ್ರಮಾಣ

ಗುವಾಹಟಿ: ಅಸ್ಸಾಂ ವಿಧಾನಸಭೆಗೆ ಬಿಜೆಪಿಯಿಂದ ಶಾಸಕಿಯಾಗಿ ಆಯ್ಕೆಯಾಗಿರುವ ನಟಿ ಅಂಗೂರ್ ಲತಾ ದೇಕಾ ಅವರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 
ಕಳೆದ ವಾರವಷ್ಟೇ ಬಾಲಿವುಡ್ ನ ನಿರ್ದೇಶಕ ರಾಮ ಗೋಪಾಲ್ ವರ್ಮಾ ಬಿಜೆಪಿ ಶಾಸಕಿ ಕಮ್ ನಟಿ ಅಂಗೂರ್ ಲತಾ ದೇಕಾ ಬಗ್ಗೆ ಸೆಕ್ಸಿಸ್ಟ್ ಶಾಸಕಿ ಎಂದು ಹೇಳಿಕೆ ನೀಡಿ. ಬಿಜೆಪಿಯಿಂದ ಇಂತಹವರು ಆಯ್ಕೆಯಾಗಿದ್ದಾರೆಂದರೆ ಅಚ್ಚೇ ದಿನ್ ಬಂದಿದೆ ಎಂದು ಅರ್ಥ ಎಂದು ಕಮೇಂಟ್ ಮಾಡಿದ್ದರು. ಈ ಮೂಲಕ ದೇಕಾ ಸುದ್ದಿಯಾಗಿದ್ದರು. 
ಅದೇ ಚೆಲುವೆ ನಿನ್ನೆ ಗುವಾಹಟಿಯಲ್ಲಿ 14ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಪಾಲ್ಗೊಂಡು, ಪ್ರಾಚೀನ ಭಾಷೆಯಾದ ಸಂಸ್ಕೃತದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಾಚೀನ ಭಾಷೆಗಳು ದಿನದಿಂದ ದಿನಕ್ಕೆ ಕಳೆದು ಹೋಗುತ್ತಿವೆ. ಅಂತಹ ಭಾಷೆಗಳಿಗೆ ನಾವು ಆದ್ಯತೆ ನೀಡಬೇಕು ಎಂದು ಅವರು, ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಸಂಸ್ಕೃತ ಭಾಷೆ ಪ್ರಖ್ಯಾತಿ ಮತ್ತು ಪ್ರಚಾರಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 
ವಿಧಾನಸಭೆಯಲ್ಲಿ ಸಂಸ್ಕೃತದಲ್ಲಿ ದೇಕಾ ಪ್ರಮಾಣವಚನ ಸ್ವೀಕರಿಸಿದ್ದು, ಅವರ ಜೊತೆಗೆ ಇಬ್ಬರು ಶಾಸಕರು ಕೂಡ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತನ್ನ ಸಹದ್ಯೋಗಿಗಳ ಈ ಬೆಂಬಲಕ್ಕೆ ದೇಕಾ ಧನ್ಯವಾದಗಳು ತಿಳಿಸಿದ್ದಾರೆ. 
ಮೂರು ದಿನಗಳ ಕಾಲ ನಡೆಯಲಿರುವ ಅಧಿವೇಶನದ ಮೊದಲ ದಿನ ನೂತನವಾಗಿ ಆಯ್ಕೆಯಾದ ಸೋನೋವಾಲ್ ಮತ್ತು 124 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!