ಅಪಘಾತ ದೃಶ್ಯ 
ದೇಶ

ದೆಹಲಿ ಮರ್ಸಿಡಿಸ್ ಹಿಟ್‌ ಆಂಡ್‌ ರನ್‌: ಆರೋಪಿ ವಯಸ್ಕನಂತೆ ವಿಚಾರಣೆಗೆ ಕೋರ್ಟ್ ಅಸ್ತು

ದೆಹಲಿಯ ಮರ್ಸಿಡಿಸ್‌ ಕಾರು ಹಿಟ್‌ ಆಂಡ್‌ ರನ್‌ ಪ್ರಕರಣದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸುವುದಕ್ಕೆ...

ನವದೆಹಲಿ: ದೆಹಲಿಯ ಮರ್ಸಿಡಿಸ್‌ ಕಾರು ಹಿಟ್‌ ಆಂಡ್‌ ರನ್‌ ಪ್ರಕರಣದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸುವುದಕ್ಕೆ ಬಾಲ ನ್ಯಾಯಮಂಡಳಿ ಶನಿವಾರ ಒಪ್ಪಿಗೆ ನೀಡಿದೆ. 
ಅಪಘಾತದ ವೇಳೆ ಆರೋಪಿಗೆ 18 ವರ್ಷ ತುಂಬುವುದಕ್ಕೆ ಕೇವಲ ನಾಲ್ಕು ದಿನ ಮಾತ್ರ ಬಾಕಿ ಇತ್ತು. ಹೀಗಾಗಿ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆಗೆ ಗುರಿಪಡಿಸಲು ಅನುಮತಿ ನೀಡುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ ಮನವಿಯನ್ನು ಬಾಲ ನ್ಯಾಯ ಮಂಡಳಿಯು ಇಂದು ಪುರಸ್ಕರಿಸಿದೆ.
ಕಳೆದ ಎಪ್ರಿಲ್‌ 4ರಂದು ಅಪ್ರಾಪ್ತ ಬಾಲಕನೊಬ್ಬ ನುಮರ್ಸಿಡಿಸ್‌ ವೇಗವಾಗಿ ಚಲಾಯಿಸಿ 32ರ ಹರೆಯದ ಉದ್ಯಮಿ ಸಿದ್ಧಾರ್ಥ ಶರ್ಮಾ ಎಂಬವರ ಮೇಲೆ ಹರಿಸಿ ಅವರ ಸಾವಿಗೆ ಕಾರಣನಾಗಿದ್ದ.
ಮೇ 26ರಂದು ದೆಹಲಿ ಪೊಲೀಸರು ಆರೋಪಿಯ ವಿರುದ್ಧ ಕೊಲೆಯಲ್ಲದ ನರಹತ್ಯೆ ಆರೋಪವನ್ನು ಹೊರಿಸಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಜತೆಗೆ ಆರೋಪಿಯ ತಂದೆ ಹಾಗೂ ಕುಟುಂಬದ ವಾಹನ ಚಾಲಕನ ವಿರುದ್ಧ ಚಾರ್ಜ್‌ ಶೀಟ್‌ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಮಗ್ರತೆ, ಸಮರ್ಪಣೆ ಉದ್ದೇಶದೊಂದಿಗೆ ಕರ್ನಾಟಕ ಜನತೆಗೆ ಸೇವೆ ಸಲ್ಲಿಸಲು ಬದ್ಧ: ಡಿಕೆ ಶಿವಕುಮಾರ್

ದೆಹಲಿಯ ಮೆಹ್ರೌಲಿಯಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ!

ಸಿದ್ದರಾಮಯ್ಯಗೆ ವಿಶ್ರಾಂತಿ ನೀಡಲ್ಲ, ಅವರ ಸೇವೆ ಇನ್ನೂ ಅಗತ್ಯವಿದೆ: CLP ಸಭೆಯಲ್ಲಿ ವೇಣುಗೋಪಾಲ್ ಭಾವುಕ

ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ: ಡಿಕೆಶಿಗೆ ಸಿದ್ದು ಪತ್ರ!

ಲೋಕಭವನಕ್ಕೆ ತೆರಳಿದ ಡಿ.ಕೆ ಶಿವಕುಮಾರ್: ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ; ಜೂನ್ 3ಕ್ಕೆ ಸಿಎಂ ಆಗಿ ಪ್ರಮಾಣವಚನ!

SCROLL FOR NEXT