ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಲಾಗಿರುವ ಚಿತ್ರ- ಅನಂತ್ ನಾಗ್ ನಲ್ಲಿ ಎಕೆ-47 ರೈಫಲ್ ಹಿಡಿದು ಹೋಗುತ್ತಿರುವ ಉಗ್ರರು
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಇಬ್ಬರು ಪೊಲೀಸರನ್ನು ಹತ್ಯೆಗೈಯ್ಯುವ ಮುನ್ನ ಎಕೆ-47 ರೈಫಲ್ ಹಿಡಿದು ಹೋಗುತ್ತಿದ್ದ ಉಗ್ರರ ಭಾವಚಿತ್ರವನ್ನು ಪಾದಚಾರಿಯೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಭಾವಚಿತ್ರ ವೈರಲ್ ಆಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ದಾಳಿ ಮಾಡಲು ತೆರಳುತ್ತಿದ್ದ ಇಬ್ಬರು ಉಗ್ರರನ್ನು ಪಾದಚಾರಿಗಳೊಬ್ಬರು ತಮ್ಮ ಕ್ಯಾಮಾರಾದಲ್ಲಿ ಸೆರೆ ಹಿಡಿದಿದ್ದಾರೆ. ಆ ಚಿತ್ರದಲ್ಲಿ ಉಗ್ರರು ಕೈಯಲ್ಲಿ ಎಕೆ-47 ರೈಫಲ್ ಹಿಡಿದು, ಶಸ್ತ್ರಾಸ್ತ್ರಗಳೊಂದಿರುವ ಬ್ಯಾಗ್ ಹಿಡಿದು ಸಾಗುತ್ತಿರುವ ದೃಶ್ಯ ಕಂಡು ಬಂದಿದೆ.
ಆದರೆ, ಈ ಚಿತ್ರವನ್ನು ಯಾರು ತೆಗೆದಿದ್ದಾರೆಂಬ ಮಾಹಿತಿ ತಿಳಿದು ಬಂದಿಲ್ಲ. ಆದರೆ, ಕೃತ್ಯವೆಸಗಿದ ಉಗ್ರರ ಯಾರು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿ ಹೇಳಿಕೆಯ ಪ್ರಕಾರ, ಉಗ್ರರು ದಾಳಿ ಮಾಡಲು ಬರುತ್ತಿದ್ದಂತೆ ಅಲ್ಲಿದ್ದ ಜನರು ಹೆದರಿ ಮನೆಯೊಳೆಗೆ ಅಂಗಡಿಯೊಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡಿದ್ದಾರೆ. ಅಲ್ಲದೇ ಗಲಭೆಯೂ ಆಗಿದೆ. ಗುಂಡಿನ ಶಬ್ಧ ಕೇಳುತ್ತಿದ್ದಂತೆ ಭೂಮಿ ಮೇಲೆ ನಾವು ಮಲಗಿದ್ದೇವೆ. ಜನ ನಿರತ ಪ್ರದೇಶದಲ್ಲಿ ಉಗ್ರರು ದಾಳಿ ಮಾಡಿರುವುದರಿಂದ ಯಾರು ಇದ್ದಕ್ಕಿದ್ದಂತೆ ದಾಳಿ ಮಾಡುತ್ತಿದ್ದಾರೆಂಬುದು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 24 ಗಂಟೆಯೊಳಗೆ ಉಗ್ರರು ದಾಳಿ ನಡೆಸಿ ಮೂರು ಬಿಎಸ್ ಎಫ್ ಯೋಧರು ಮತ್ತು ಇಬ್ಬರು ಪೊಲೀಸರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಶಸ್ತ್ರಾಸ್ತ್ರಗಳೊಂದಿರುವ ಉಗ್ರರು ಕಾಶ್ಮೀರದೊಳಗೆ ನುಸುಳಿದ್ದು, ಮತ್ತಷ್ಟು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics