ದೇಶ

3 ವಾರಗಳಲ್ಲಿ ಪ್ರಾಕೃತಿಕ ಜಲಮೂಲಗಳನ್ನು ಶುದ್ಧೀಕರಿಸಿ: ದೆಹಲಿ ಸರ್ಕಾರಕ್ಕೆ ಎನ್ ಜಿಟಿ ಆದೇಶ

Shilpa D

ದೆಹಲಿ: ಮುಂಗಾರು ಮಳೆ ಆಗಮನಕ್ಕೆ ಮುನ್ನ ಅಂದರೆ ಮೂರು ವಾರಗಳ ಒಳಗಾಗಿ ದೆಹಲಿಯಲ್ಲಿರುವ ಎಲ್ಲಾ ಜಲಮೂಲಗಳನ್ನೂ  ಸ್ವಚ್ಛಗೊಳಿಸುವಂತೆ ದೆಹಲಿ ಸರ್ಕಾರಕ್ಕೆ ಹಸಿರು ನ್ಯಾಯಮಂಡಳಿಯ ಆದೇಶ ನೀಡಿದೆ.

ಎನ್​ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತರ್​ಕುಮಾರ್ ನೇತೃತ್ವದ ಪೀಠವು ಪರಿಸರ ಮತ್ತು ಅರಣ್ಯ ಸಚಿವಾಲಯ, ನಗರಾಭಿವೃದ್ಧಿ ಸಚಿವಾಲಯ, ಕೇಂದ್ರ ಅಂತರ್ಜಲ ಪ್ರಾಧಿಕಾರ, ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮತ್ತು ದೆಹಲಿ ಜಲ ಮಂಡಳಿ ಮತ್ತು ಪರಿಸರ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು ಎರಡು ವಾರಗಳಲ್ಲಿ ಉತ್ತರಿಸುವಂತೆ ತಿಳಿಸಿದೆ.

ಪರಿಸರ ಮಿತ್ರ, ಅಗ್ಗದ ವಿಧಾನಗಳ ಮೂಲಕ ಮಳೆ ನೀರು ಕೊಯ್ಲಿಗೆ ರಾಷ್ಟ್ರವ್ಯಾಪಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಸರ್ಕಾರೇತರ ಸಂಘಟನೆ ಚೇತನ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಹಸಿರು ನ್ಯಾಯಮಂಡಳಿ ಈ ಆದೇಶ ಹೊರಡಿಸಿದೆ.

ಜಲಮೂಲಗಳನ್ನು ಸ್ವಚ್ಚಗೊಳಿಸಿದರೇ ಮುಂಬರುವ ಮುಂಗಾರುವೇಳೆ ಹೆಚ್ಚಿ ನ ಪ್ರಮಾಣದ ನೀರನ್ನು ಶೇಖರಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಮಂಡಳಿ ಅಭಿಪ್ರಾಯ ಪಟ್ಟಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 9ಕ್ಕೆಮುಂದೂಡಿದೆ.

SCROLL FOR NEXT