ಪ್ರಕಾಶ್ ಸಿಂಗ್ ಬಾದಲ್ 
ದೇಶ

ದೇಗುಲ ಪ್ರವೇಶ ವೇಳೆ ಸಿಎಂಗೆ ಅಗೌರವ: ಅರ್ಚಕ ವರ್ಗಾವಣೆ

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರು ಮಂದಿರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾಂಪ್ರದಾಯಿಕ ಗೌರವ ನೀಡಲು ನಿರಾಕರಿಸಿದ ಕಾರಣಕ್ಕೆ ..

ಅಮೃತ ಸರ:  ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರು  ಮಂದಿರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ  ಸಾಂಪ್ರದಾಯಿಕ ಗೌರವ ನೀಡಲು ನಿರಾಕರಿಸಿದ ಕಾರಣಕ್ಕೆ ಅರ್ಚಕ ಬಲ್ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ದೇವಸ್ಥಾನದ ಗರ್ಭಗುಡಿಯಲ್ಲಿ ಬಾದಲ್ ಅವರಿಗೆ ಶಿರೋ ವಸ್ತ್ರ ಸರ್‌ಪೋರಾ ನೀಡಲು ಅರ್ಚಕರು ನಿರಾಕರಿಸಿದ್ದರು. ಈ ಕಾರಣಕ್ಕೆ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಸಿಖ್ ಧರ್ಮಗ್ರಂಥ 'ಗ್ರಂಥ ಸಾಹಿಬ್‌' ಅನ್ನು ಅಪವಿತ್ರಗೊಳಿಸಿದ್ದ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಸರ್ಕಾರ ತಿರಸ್ಕಾರಯುತವಾಗಿ ವರ್ತಿಸಿದ್ದನ್ನು ವಿರೋಧಿಸಿ ತಾನು ಸಿಎಂಗೆ ಸರ್‌ಪೋರಾ ಗೌರವ ವಸ್ತ್ರ ನೀಡಲಿಲ್ಲ ಎಂದು ಬಲ್ಬೀರ್ ಸಿಂಗ್ ಹೇಳಿದ್ದಾರೆ.

ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಇತ್ತೀಚಿಗೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಪುಟ ರಚನೆ ಕಸರತ್ತು: ನಿಯೋಜಿತ ಸಿಎಂ ಡಿಕೆ ಶಿವಕುಮಾರ್, ಹಂಗಾಮಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ

Congress ಸರ್ಕಾರವಿದ್ದರೂ ಹಿಮಾಚಲ ಪ್ರದೇಶದಲ್ಲಿ 3 ಪುರಸಭೆ ಗೆದ್ದ BJP, ಒಂದಕ್ಕೆ ಕಾಂಗ್ರೆಸ್ ತೃಪ್ತಿ!

ಐಶ್ವರ್ಯಾ ರೈ ಕೇನ್ಸ್ ಲುಕ್‌ಗೆ ಬಾಡಿ ಶೇಮಿಂಗ್: ಕಂಗನಾ ನಂತರ ಟ್ರೋಲರ್ಸ್ ವಿರುದ್ಧ ಮಾಧುರಿ ದೀಕ್ಷಿತ್ ಗರಂ!

ಡಿಕೆಶಿ ಪ್ರಮಾಣ ವಚನ ದಿನವೇ ಹೊಸ ಕಾಂಗ್ರೆಸ್ ಭವನಕ್ಕೆ ರಾಹುಲ್ ಗಾಂಧಿ ಶಂಕು ಸ್ಥಾಪನೆ; ಸ್ಥಳ ಪರಿಶೀಲಿಸಿದ ನಿಯೋಜಿತ ಸಿಎಂ

IPL 2026 Final: ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ, ತಂಡಕ್ಕೆ ಮರಳಿದ ಆಲ್ರೌಂಡರ್ Romario Shepherd

SCROLL FOR NEXT