ಶ್ರೀ ಶ್ರೀ ರವಿಶಂಕರ್ ಗುರೂಜಿ
ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ವಿಧಿಸಿದ್ದ ರು. ರು.4.75 ಕೋಟಿ ದಂಡವನ್ನು ಆರ್ಟ್ ಆಫ್ ಲಿವಿಂಗ್ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪಾವತಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜಧಾನಿಯ ಯಮುನಾ ನದಿ ತಟದಲ್ಲಿ ಮೂರು ದಿನಗಳ ಕಾಲ ನಡೆಸಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದ ಯಾವುದೇ ಪರಿಸರ ಹಾನಿಯಾಗಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ವಾದ ಮಂಡಿಸಿತ್ತು. ಆದರೆ ವಾದವನ್ನು ತಿರಸ್ಕರಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಉಳಿದ ರು. 4.75 ಕೋಟಿ ಹಣವನ್ನು ಪಾವತಿಸುವಂತೆ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ದಂಡದ ಹಣವನ್ನು ಪಾವತಿಸಿದೆ ಎಂದು ಮೂಲಗಳು ತಿಳಿಸಿವೆ.
ರು.5 ಕೋಟಿ ಪರಿಹಾರ ಪಾವತಿಸುವ ಷರತ್ತಿನ ಆಧಾರದ ಮೇಲೆ ಆರ್ಟ್ ಆಫ್ ಲಿವಿಂಗ್ ಗೆ ಯುಮನಾ ನದಿ ತೀರದಲ್ಲಿ ಮೂರು ದಿನಗಳ ವಿಶ್ವಸಂಸ್ಕೃತಿ ಉತ್ಸವ ನಡೆಸಲು ಅನುಮತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್ ರು.25 ಲಕ್ಷ ಹಣವನ್ನು ಪಾವತಿಸಿ, ಬಾಕಿ ಹಣವನ್ನು ತದ ನಂತರ ಪಾವತಿಸುವುದಾಗಿ ತಿಳಿಸಿತ್ತು ಎಂದು ಎನ್ ಜಿಟಿ ಹೇಳಿತ್ತು.
ಆದರೆ, ಉತ್ಸವ ಮುಗಿದ ಮೇಲೆ ಕಾರ್ಯಕ್ರಮದಿಂದಾಗಿ ಯಾವುದೇ ನದಿ, ಪರಿಸರ ಮಾಲಿನ್ಯ ಆಗಿಲ್ಲ. ಹಾಗಾಗಿ, ನಾವು ಹಣ ಪಾವತಿಸುವುದಿಲ್ಲ ಎಂದು ಶ್ರೀ ಶ್ರೀ ರವಿಶಂಕರ್ ಗೂರೂಜಿ ತಿಳಿಸಿದ್ದರು. ಆದರೆ ಇದಕ್ಕೆ ಎನ್ ಜಿಟಿ ವಿರೋಧ ವ್ಯಕ್ತಪಡಿಸಿ, ಒಂದು ವಾರದೊಳಗೆ ದಂಡ ಪಾವತಿಸುವಂತೆ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ದಂಡ ಪಾವತಿಸಿದೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics