ಹಿರಿಯ ಪತ್ರಕರ್ತ ಕೆ.ಕೆ.ಕತ್ಯಾಲ್(ಸಂಗ್ರಹ ಚಿತ್ರ) 
ದೇಶ

ಹಿರಿಯ ಪತ್ರಕರ್ತ ಕೆ.ಕೆ.ಕತ್ಯಾಲ್ ನಿಧನ

ಹಿಂದೂ ಪತ್ರಿಕೆಯ ದೆಹಲಿ ವಿಭಾಗದ ಮಾಜಿ ಸ್ಥಳೀಯ ಸಂಪಾದಕ, ಹಿರಿಯ ಪತ್ರಕರ್ತ ಕೆ.ಕೆ.ಕತ್ಯಾಲ್ ದೀರ್ಘಕಾಲದ...

ನವದೆಹಲಿ: ಹಿಂದೂ ಪತ್ರಿಕೆಯ ದೆಹಲಿ ವಿಭಾಗದ ಮಾಜಿ ಸ್ಥಳೀಯ ಸಂಪಾದಕ, ಹಿರಿಯ ಪತ್ರಕರ್ತ ಕೆ.ಕೆ.ಕತ್ಯಾಲ್  ದೀರ್ಘಕಾಲದ ಅಸೌಖ್ಯದ ನಂತರ ಬುಧವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಹಿಂದೂ ಪತ್ರಿಕೆಗೆ ಸೇರುವ ಮುನ್ನ ಕತ್ಯಾಲ್ ಸ್ಟೇಟ್ಸ್ ಮ್ಯಾನ್ ಮತ್ತು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ನಿರಂತರ ಪ್ರವಾಸದಲ್ಲಿ ತೊಡಗುತ್ತಾ ಪತ್ರಿಕೋದ್ಯಮದ ಆಳ-ಅಗಲ ಅರಿತಿದ್ದ ಕತ್ಯಾಲ್ ಅವರಿಗೆ ರಾಯಭಾರ ಮತ್ತು ರಾಜಕೀಯ ವಲಯದಲ್ಲಿ ಉತ್ತಮ ಸಂಪರ್ಕವಿತ್ತು. ಅವರಿಗೆ 1994ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಜಿ.ಕೆ.ರೆಡ್ಡಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಇಂದಿನ ಪಾಕಿಸ್ತಾನದಲ್ಲಿರುವ ಜಂಗ್ ಪ್ರದೇಶದಲ್ಲಿ ಹುಟ್ಟಿದವರಾಗಿದ್ದ ಕತ್ಯಾಲ್ 2004ರಲ್ಲಿ ವೃತ್ತಿಯಿಂದ ನಿವೃತ್ತರಾದ ನಂತರ ಭಾರತ-ಪಾಕ್ ಸಂಬಂಧ ವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು.

ಕತ್ಯಾಲ್ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!

ಮಲೆನಾಡು, ಕರಾವಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ: ಕೇಂದ್ರ ಸಚಿವ ವಿ. ಸೋಮಣ್ಣ