ಸಾಂದರ್ಭಿಕ ಚಿತ್ರ 
ದೇಶ

ರೈಲುಗಳಲ್ಲಿ ಶಿಶು ಆಹಾರ, ಮಕ್ಕಳಿಗೆ ಊಟದ ಸೌಲಭ್ಯ

ಶಿಶುಗಳು ಮತ್ತು ಸಣ್ಣ ಮಕ್ಕಳನ್ನು ಹೊಂದಿರುವ ತಾಯಂದಿರು ಇನ್ನು ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವಾಗ ತಮ್ಮ ಮಕ್ಕಳಿಗೆ...

ನವದೆಹಲಿ: ಶಿಶುಗಳು ಮತ್ತು ಸಣ್ಣ ಮಕ್ಕಳನ್ನು ಹೊಂದಿರುವ ತಾಯಂದಿರು ಇನ್ನು ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವಾಗ ತಮ್ಮ ಮಕ್ಕಳಿಗೆ ತಿನ್ನಲು ಏನು ನೀಡುವುದು, ಹೊರಗಿನ ಆಹಾರ ಅಷ್ಟು ಒಳ್ಳೆಯದಲ್ಲ, ಇನ್ನು ರೈಲ್ವೆ ನಿಲ್ದಾಣಗಳಲ್ಲಿ ಪುಟ್ಟ ಮಕ್ಕಳಿಗೆ ಬೇಕಾದ ಆಹಾರ ದೊರಕುವುದಿಲ್ಲವಲ್ಲಾ ಎಂದು ಚಿಂತಿಸಬೇಕಾಗಿಲ್ಲ. ಮಕ್ಕಳಿಗೆಂದೇ ರೈಲು ನಿಲ್ದಾಣಗಳಲ್ಲಿ ಬಿಸಿ ಹಾಲು, ಬಿಸಿ ನೀರು ಮತ್ತು ಶಿಶು ಆಹಾರಗಳನ್ನು ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಆರಂಭದಲ್ಲಿ 25 ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಆರಂಭವಾಗಲಿದೆ.

ಜನನಿ ಸೇವಾ ಹೆಸರಿನಲ್ಲಿ ಈ ಸೌಲಭ್ಯ ದೆಹಲಿ, ಮುಂಬೈ, ಸಿಎಸ್ ಟಿಎಂ, ಮುಂಬೈ ಸೆಂಟ್ರಲ್, ಹೌರಾ, ಚೆನ್ನೈ ಸೆಂಟ್ರಲ್, ನಾಗ್ಪುರ, ಪುಣೆ, ಸೂರತ್, ಲಕ್ನೋ ಮತ್ತು ಮೊರದಾಬಾದ್ ಸೇರಿದಂತೆ ಒಟ್ಟು 25 ನಿಲ್ದಾಣಗಳಲ್ಲಿ ಆರಂಭವಾಗಲಿದೆ.

ಶಿಶು ಮತ್ತು ಸಣ್ಣ ಮಕ್ಕಳ ತಾಯಂದಿರಿಗೆ ಅನುಕೂಲವಾಗಲು ಜನನಿ ಸೇವಾ ಸೌಲಭ್ಯವನ್ನು ಜಾರಿಗೆ ತರುತ್ತಿದ್ದೇವೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದರು. ರೈಲ್ವೆ ನಿಲ್ದಾಣಗಳಲ್ಲಿ ಹಾಲು ದೊರಕುವುದಿಲ್ಲ ಎಂದು ಒಬ್ಬ ತಾಯಿ ಸಾಮಾಜಿಕ ತಾಣದಲ್ಲಿ ನೀಡಿದ ದೂರಿನ ನಂತರ ಈ ಸೌಲಭ್ಯಕ್ಕೆ ಚಾಲನೆ ನೀಡಿದ್ದೇವೆ ಎಂದರು.

ಇನ್ನೊಂದು ಉಪಕ್ರಮದಲ್ಲಿ ರೈಲ್ವೆ ಇಲಾಖೆ ದೆಹಲಿ, ಹೌರಾ, ಚೆನ್ನೈ ಎಗ್ಮೋರ್ ಮತ್ತು ಮುಂಬೈ ಸಿಎಸ್ ಟಿಎಂ ನಿಲ್ದಾಣಗಳ ಮೂಲಕ ಹಾದುಹೋಗುವ ರೈಲುಗಳಲ್ಲಿ ಮಕ್ಕಳ ಆಹಾರವನ್ನು ಸೇರ್ಪಡೆ ಮಾಡಿದ್ದು, 5ರಿಂದ 12 ವರ್ಷದವರೆಗಿನ ಮಕ್ಕಳಿಗೆ ಇ-ಕ್ಯಾಟರಿಂಗ್ ಮೂಲಕ ನೀಡಲಾಗುತ್ತದೆ ಇಲ್ಲವೇ ಪ್ರಯಾಣಿಕರು ನೇರವಾಗಿ ಖರೀದಿಸಬಹುದು. ಐಆರ್ ಸಿಟಿಸಿಯ ಇ-ಕ್ಯಾಟರಿಂಗ್ ವೆಬ್ ಸೈಟ್ ಮೂಲಕ ಪ್ರಯಾಣಿಕರು ಊಟಕ್ಕೆ ಆರ್ಡರ್ ಮಾಡಬಹುದು. ಇದಕ್ಕಾಗಿ ನಿಗದಿತ ದೂರವಾಣಿ ಸಂಖ್ಯೆ, ಎಸ್ ಎಂಎಸ್, ಮೊಬೈಲ್ ಆಪ್ ಮತ್ತು ಟೋಲ್ ಫ್ರೀ ಸಂಖ್ಯೆ 1323 ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT