ದೇಶ

2000 ಜನರು ಭೂಕಬಳಿಕೆ ಮಾಡಿದ್ದರೂ ಮಾಹಿತಿ ಇಲ್ಲ...ಇದೆಂತಹ ಸರ್ಕಾರ: ರಾಜನಾಥ್

Manjula VN

ಲಖನೌ: ಮಥುರಾದಲ್ಲಿ 2 ಸಾವಿರದಷ್ಟು ಜನರು ಭೂಕಬಳಿಕೆಮಾಡಿದ್ದಾರೆ. ರಾಜ್ಯದಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಭೂಕಬಳಿಕೆಯಾಗಿದ್ದರೂ ಇಲ್ಲಿ ಸರ್ಕಾರಕ್ಕೆ ಮಾತ್ರ ಈ ಬಗೆಗಿನ ಮಾಹಿತಿ ತಿಳಿದಿಲ್ಲ. ಇದೆಂತಹ ಸರ್ಕಾರ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಆಯೋಜನೆ ಮಾಡಲಾಗಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಮಥುರಾದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಇಲ್ಲಿನ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರದ ಅರಿವೇ ಇಲ್ಲ. ಇದಾವ ರೀತಿಯ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲಹಾಬಾದ್ ಹೈ ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಅಕ್ರಮವಾಗಿ ಕಬಳಿಕೆ ಮಾಡಿದ್ದ ಭೂಮಿಯನ್ನು ತೆರವುಗೊಳಿಸಲು ಹೋದಾಗ ಬಹುಸಂಖ್ಯಾತ ಜನರು ಒಟ್ಟಾರೆ ಸೇರಿದ್ದಾರೆ. ಈ ವೇಳೆ ಸ್ಥಳದಲ್ಲಿ ಘರ್ಷಣೆ ಆರಂಭವಾಗಿ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದೆ. ಘಠನೆಯಲ್ಲಿ 29 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಮಥುರಾ ಘರ್ಷಣೆಯನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿದ್ದೇ ಆದರೆ, ಸಿಬಿಐ ತನಿಖೆಗೆ ಒಪ್ಪಿಸಲು ಕೇಂದ್ರ ಸಿದ್ಧವಿದೆ ಎಂದು ಹೇಳಿದ್ದಾರೆ.

SCROLL FOR NEXT