ನವದೆಹಲಿ: ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಬಂದರೂ ವಿಮಾನ ಬರುವುದರಿಂದ ಹಲವು ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ತಡವಾಗಿ ಬರುವ ವಿಮಾನದಿಂದಾಗಿ ಎಷ್ಟೋ ಮಂದಿಯ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸಮಸ್ಯೆಗಳಿಗೆ ವಿಮಾನಯಾನ ಸಚಿವಾಲಯ ಇದೀಗ ಫುಲ್ ಸ್ಟಾಪ್ ಇಟ್ಟಿದ್ದು, ವಿಮಾನ ಪ್ರಯಾಣಿಕರಿಗೆ ಶೀಘ್ರದಲ್ಲೇ ಅಚ್ಚೇದಿನ್ ಬರಲಿದೆ.
ವಿಮಾನಯಾನ ಸಚಿವಾಲಯ ಪ್ರಯಾಣಿಕ ಸ್ನೇಹಿ ಹೊಸ ನಿಮಯಗಳನ್ನು ಘೋಷಿಸಿದ್ದು, ಟಿಕೆಟ್ ರದ್ದು ಶುಲ್ಕವು ಅದರ ಮೂಲ ಬೆಲೆಯನ್ನು ಮೀರಬಾರದು ಎಂದು ಹೇಳಿದೆ.
ಅಲ್ಲದೆ, ವಿಮಾನ ಬೋರ್ಡಿಂಗ್ ವೇಳೆ ಓವರ್-ಬುಕಿಂಗ್ ನಿಂದ ಸ್ಥಳವಿಲ್ಲದೆ ಟಿಕೆಟ್ ರದ್ದಾದಲ್ಲಿ ಪ್ರಯಾಣಿಕರಿಗೆ ರು. 20 ಸಾವಿರ ವರೆಗೂ ಪರಿಹಾರ ನೀಡಬೇಕು ಎಂದು ಹೇಳಿದ್ದು, ಪ್ರಯಾಣಿಕರು ಟಿಕೆಟ್ ರದ್ದುಗೊಳಿಸಿದ್ದಲ್ಲಿ ಹಣವನ್ನು ನಗದು ರೂಪದಲ್ಲಿ ಪಡೆದುಕೊಳ್ಳುವ ಅಥವಾ ಕ್ರೆಡಿಟ್ ರೂಪದಲ್ಲಿ ಇರಿಸುವ ಅವಕಾಶವನ್ನು ನೀಡಿದೆ.
ವಿಮಾನ ಸಚಿವಾಲಯ ಘೋಷಿಸಿರುವ ನಿಯಮಗಳು ಈ ಕೆಳಕಂಡಂತಿವೆ...