ಜೋಧಪುರ್: ಭಾರತೀಯ ವಾಯುಪಡೆಯ ಮಿಗ್-27 ಯುದ್ಧವಿಮಾನ ಸೋಮವಾರ ರಾಜಸ್ತಾನದ ಜೋಧಪುರದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನಿಬ್ಬರಿಗೆ ಗಾಯಗಳಾಗಿವೆ.
ಜೋಧಪುರ ವಾಯುನೆಲೆ ಹತ್ತಿರ ವಿಮಾನ ಎಂದಿನಂತೆ ತರಬೇತಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ನೆಲಕ್ಕಪ್ಪಳಿಸಿ ನುಚ್ಚುನೂರಾಗಿದೆ.
ವಿಮಾನ ಬಿದ್ದ ಸ್ಥಳದ ಅಕ್ಕಪಕ್ಕದ ಎರಡು ಮನೆಗಳು ಹಾನಿಗೀಡಾಗಿದ್ದು ಬಿಟ್ಟರೆ ಯಾವುದೇ ಸಾವು, ನೋವು ಸಂಭವಿಸಿಲ್ಲ. ಅಪಘಾತ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.