ಸಾಲದ ದೊರೆ ವಿಜಯ್ ಮಲ್ 
ದೇಶ

ಕಾನೂನು ಆಧಾರವಿಲ್ಲದೆಯೇ ಇಡಿ ಕ್ರಮ ಕೈಗೊಳ್ಳುತ್ತಿದೆ: ವಿಜಯ್ ಮಲ್ಯ

ಐಡಿಬಿಐ ಬ್ಯಾಂಕಿನ ರು.900 ಕೋಟಿ ಸಾಲ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೈಗೊಳ್ಳುತ್ತಿರುವ ಕ್ರಮದ ವಿರುದ್ಧ ಸಾಲದ ದೊರೆ ವಿಜಯ್ ಮಲ್ಯ ಅವರು...

ನವದೆಹಲಿ: ಐಡಿಬಿಐ ಬ್ಯಾಂಕಿನ ರು.900 ಕೋಟಿ ಸಾಲ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೈಗೊಳ್ಳುತ್ತಿರುವ ಕ್ರಮದ ವಿರುದ್ಧ ಸಾಲದ ದೊರೆ ವಿಜಯ್ ಮಲ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಕಾನೂನು ಆಧಾರವಿಲ್ಲದೆಯೇ ಇಡಿ ಕ್ರಮ ಕೈಗೊಳ್ಳುತ್ತಿದೆ ಎಂದು ಭಾನುವಾರ ಹೇಳಿದ್ದಾರೆ.

ಈ ಕುರಿತಂತೆ ಇಮೇಲ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ತಾರ್ಕಿಕ ವಿವರಣೆ ಅಥವಾ ಕಾನೂನು ಆಧಾರವಿಲ್ಲದೆಯೇ ನನ್ನ ವಿರುದ್ಧ ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳುತ್ತಿದೆ. ಇಡಿ ಕ್ರಮದಿಂದಾಗಿ ಸಾಕಷ್ಟು ನೊಂದಿದ್ದೇನೆ. ನನ್ನ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳಲು ಇಡಿ ಚಿಂತನೆ ನಡೆಸುತ್ತಿದೆ. ಇಡಿ ಕ್ರಮದಿಂದ ಬ್ಯಾಂಕುಗಳ ಸಾಲ ತೀರಿಸುವುದು ಮತ್ತಷ್ಟು ಕಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಕಿಂಗಿಫಿಶರ್ ಏರ್ ಲೈನ್ಸ್ ನ ಯುಬಿ ಗ್ರೂಪ್ ನಲ್ಲಿ ರು.6 ಸಾವಿರ ಕೋಟಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಎಂದಿಗೂ ತನಿಖೆಗೆ ಹಾಜರಾಗುವುದಿಲ್ಲ ಎಂದು ಹೇಳಿಲ್ಲ. ಆದರೆ, ಕೆಲಸಗಾರರಿಗೆ, ತೆರಿಗೆ ಆಧಿಕಾರಿಗಳಿಗೆ ಹಾಗೂ ಬ್ಯಾಂಕುಗಳಿಗೆ ಹಣ ನೀಡಲು ಕಾಲಾವಕಾಶಬೇಕೆಂದು ಕೇಳಿದ್ದ ಎಂದು ಹೇಳಿದ್ದಾರೆ.

ಇಂಟರ್ ಪೋಲ್ ಗೆ ಪತ್ರ ಬರೆದ ಜಾರಿ ನಿರ್ದೇಶನಾಲಯ
ಉದ್ಯಮಿ ವಿಜಯ್ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವುದು ಇಂಟರ್ ಪೋಲ್ ನ ಕರ್ತವ್ಯವಾಗಿದೆ ಎಂದು ಇಂಟರ್ ಪೋಲ್ ಗೆ ಜಾರಿ ನಿರ್ದೇಶನಾಲಯ ತಿಳಿಸಿದೆ.

ಈ ಕುರಿತಂತೆ ಪತ್ರ ಬರೆದಿರುವ ಇಡಿ, ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಅಗತ್ಯವಾದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರೈಸಲಾಗಿದೆ. ಬ್ಯಾಂಕುಗಳಿಗೆ ನ್ಯಾಯ ಒದಗಿಸಲು ಮಲ್ಯ ಅವರ ವಿಚಾರಣೆ ನಡೆಸಲೇಬೇಕು. ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ತನಿಖೆ ಸಂಸ್ಥೆಗಳು ಅನುಸರಿಸಿವೆ. ಮಲ್ಯ ಅವರನ್ನು ಘೋಷಿತ ಅಪರಾಧಇ ಎಂದು ಪ್ರಕಟಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video