ಅಲಹಬಾದ್: ಅಲಹಬಾದ್ ನಲ್ಲಿ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ತನ್ನನ್ನು ತಾನು ಉತ್ತರ ಪ್ರದೇಶ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳಲು ಯತ್ನಿಸಿದ ವರುಣ್ ಗಾಂಧಿ ನಡೆಯ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತೀವ್ರ ಅಸಮಾಧಾನಗೊಂಡಿದ್ದು, ಇದಕ್ಕೆ ಕಾರಣರಾದ ಪಕ್ಷದ ಇಬ್ಬರು ಕಾರ್ಯಕರ್ತರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸುಲ್ತಾನಪುರ ಬಿಜೆಪಿ ಸಂಸದ ವರುಣ್ ಗಾಂಧಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ನೂರಾರು ಪೋಸ್ಟರ್ ಗಳನ್ನು ನಗರದಲ್ಲಿ ಹಾಕಲಾಗಿತ್ತು. ಈ ಪೋಸ್ಟರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಚಿತ್ರಗಳು ಸಹ ಇವೆ.
ವರುಣ್ ಗಾಂಧಿಯ ಈ ನಡೆ ಬಗ್ಗೆ ಗರಂ ಆಗಿರುವ ಅಮಿತ್ ಶಾ, ಪಕ್ಷದ ರಾಜ್ಯ ಘಟಕದಿಂದ ಈ ಬಗ್ಗೆ ವರದಿ ಪಡೆದಿದ್ದಾರೆ. ಇದು ವರುಣ್ ಗಾಂಧಿ ಬೆಂಬಲಿಗರಾಗಿರುವ ಇಬ್ಬರು ಸ್ಥಳೀಯ ಕಾರ್ಯಕರ್ತರು ಕೆಲಸ ಎಂಬುದು ಪತ್ತೆಯಾಗಿದೆ. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗಿದೆ.
ಅಮಿತ್ ಶಾ ಅವರು ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ ಆಗಮಿಸುತ್ತಿದ್ದಂತೆಯೇ ಪಕ್ಷದ ಕೆಲವು ಕಾರ್ಯಕರ್ತರು ವರುಣ್ ಗಾಂಧಿ ಪರ ಘೋಷಣೆ ಕೂಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics