ತೆಲಂಗಾಣದಲ್ಲಿ ಪೋಲಿಯೋ ವೈರಸ್ ಪತ್ತೆ (ಸಂಗ್ರಹ ಚಿತ್ರ) 
ದೇಶ

5 ವರ್ಷದ ಬಳಿಕ ಮೊದಲ ಪೋಲಿಯೋ ವೈರಸ್‌ ಪತ್ತೆ; ತೆಲಂಗಾಣದಲ್ಲಿ ಹೈ ಅಲರ್ಟ್‌

ಪೊಲಿಯೋ ಮುಕ್ತ ಭಾರತ ಎಂಬ ಹಣೆಪಟ್ಟಿ ಹೊಂದಿದ್ದ ಭಾರತದಲ್ಲಿ ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪೊಲೀಸ್ ವೈರಾಣು ಪತ್ತೆಯಾಗಿದೆ...

ಹೈದರಾಬಾದ್‌: ಪೊಲಿಯೋ ಮುಕ್ತ ಭಾರತ ಎಂಬ ಹಣೆಪಟ್ಟಿ ಹೊಂದಿದ್ದ ಭಾರತದಲ್ಲಿ ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪೋಲಿಯೋ ವೈರಾಣು ಪತ್ತೆಯಾಗಿದೆ.

ತೆಲಂಗಾಣದ ರಾಜಧಾನಿ ಹೈದರಾಬಾದ್ ನ ಅಂಬರ್‌ಪೆಟ್‌ನಲ್ಲಿ ಮೊದಲ ಪೋಲಿಯೋ ವೈರಾಣು ಪತ್ತೆಯಾಗಿರುವ ಕುರಿತು ಮಾಹಿತಿ ಕೇಳಿಬಂದಿದ್ದು, ತೆಲಂಗಾಣ ರಾಜ್ಯಾದ್ಯಂತ ಹೈಅಲರ್ಟ್  ಘೋಷಣೆ ಮಾಡಲಾಗಿದೆ. ಟೈಪ್ 2 ಬಗೆಯ ಪೋಲಿಯೋ ವೈರಸ್‌ ಪತ್ತೆಯಾಗಿರುವುದಾಗಿ ತೆಲಂಗಾಣ ಸರ್ಕಾರ ಖಚಿತ ಪಡಿಸಿದ್ದು, ಈಗಾಗಲೇ ರಾಜ್ಯ ಆರೋಗ್ಯ ಇಲಾಖೆಗೆ ಈ ಬಗ್ಗೆ ನಿರ್ದೇಶನ  ನೀಡಿರುವ ತೆಲಂಗಾಣ ಸರ್ಕಾರ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಿದ್ದು, ಪೋಲಿಯೋ ತಡೆಗಟ್ಟುವ ಸಲುವಾಗಿ ವ್ಯಾಪಕ ಸಮರೋಪಾದಿಯ ಪೋಲಿಯೋ ನಿಗ್ರಹ ಅಭಿಯಾನವನ್ನು  ಆರಂಭಿಸಲು ಮುಂದಾಗಿದೆ.

ಈಗಾಗಲೇ ರಾಜ್ಯ ಆರೋಗ್ಯ ಇಲಾಖೆಗೆ ಈ ಬಗ್ಗೆ ನಿರ್ದೇಶನ ನೀಡಿರುವ ತೆಲಂಗಾಣ ಸರ್ಕಾರ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಿದ್ದು, ಪೋಲಿಯೋ ತಡೆಗಟ್ಟುವ ಸಲುವಾಗಿ ವ್ಯಾಪಕ  ಸಮರೋಪಾದಿಯ ಪೋಲಿಯೋ ನಿಗ್ರಹ ಅಭಿಯಾನವನ್ನು ಆರಂಭಿಸಲು ಮುಂದಾಗಿದೆ.

ಮೂಲಗಗಳ ಪ್ರಕಾರ ಪೋಲಿಯೋ ವೈರಾಣು ಅಂಬರ್ ಪೇಟ್ ನ ನೀರು ಹರಿವ ತೋಡಿನಲ್ಲಿ ಪತ್ತೆಯಾಗಿದ್ದು,  ನೀರಿನ ಪರೀಕ್ಷೆಯನ್ನು ಪ್ರಯೋಗಾಲಯದಲ್ಲಿ ಕೈಗೊಂಡಾಗ ಟೈಪ್‌ 2  ಪೋಲಿಯೋ ವೈರಸ್‌ ಪತ್ತೆಯಾಗಿತ್ತು.  ಈ ಬಗ್ಗೆ ಆರೋಗ್ಯ ಇಲಾಖೆ ನೀಡಿರುವ ವರದಿಯನ್ನಾಧರಿಸಿ ತೆಲಂಗಾಣ ಸರ್ಕಾರ ರಾಜ್ಯದಲ್ಲಿನ ಸುಮಾರು 3 ಲಕ್ಷ ಮಕ್ಕಳಿಗೆ ವ್ಯಾಕ್ಸಿನ್‌ ಹಾಕಿಸುವ  ನಿರ್ಧಾರ ಕೈಗೊಂಡಿದೆ. ಈಗಾಗಲೇ ಜಿನೇವಾದಿಂದ ಎರಡು ಲಕ್ಷ ವ್ಯಾಕ್ಸಿನ್‌ಗಳನ್ನು ವಿಮಾನದ ಮೂಲಕ ತುರ್ತಾಗಿ ತರಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಆರೋಗ್ಯ ಇಲಾಖೆಯ ಮೂಲಕ ವಿತರಣೆ  ಮಾಡಲಾಗುತ್ತದೆ ಎಂದು ತೆಲಂಗಾಣ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಶ್ವರ್ ತಿವಾರಿ ತಿಳಿಸಿದ್ದಾರೆ.

2011ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಣೆ ಮಾಡಿತ್ತು. ಆದರೆ ಐದು ವರ್ಷಗದಳ ಬಳಿಕ ಇದೀಗ ತೆಲಂಗಾಣದಲ್ಲಿ ಮೊದಲ ಬಾರಿಗೆ ಮಾರಕ  ಪೋಲಿಯೋ ವೈರಾಣು ಪತ್ತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!