ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಶಾಕಿಂಗ್: 50 ಬೀದಿ ನಾಯಿಗಳನ್ನು ಜೀವಂತವಾಗಿ ಸುಟ್ಟ ಗ್ರಾಮಸ್ಥರು!

ತಾವು ಸಾಕಿರುವ ಪ್ರಾಣಿಗಳ ಮೇಲೆ ನಾಯಿಗಳು ದಾಳಿ ಮಾಡುತ್ತಿದ್ದುದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಸುಮಾರು 50 ನಾಯಿಗಳನ್ನು ಬೆಂಕಿ ಹಚ್ಚಿ ಕೊಲೆ ..

ಸಾಂದರ್ಭಿಕ ಚಿತ್ರ
Shilpa D
Updated On : 16 Jun 2016, 10:14 am

ಚೆನ್ನೈ: ತಾವು ಸಾಕಿರುವ ಪ್ರಾಣಿಗಳ ಮೇಲೆ ನಾಯಿಗಳು ದಾಳಿ ಮಾಡುತ್ತಿದ್ದುದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಸುಮಾರು 50 ನಾಯಿಗಳನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ತಮಿಳುನಾಡಿನ ಕೆನಿಮರ್ ಹಳ್ಳಿಯ ಜನರು 50 ಬೀದಿ ನಾಯಿಗಳಿಗೆ ಬೆಂಕಿ ಹಚ್ಚಿ ಕೊಂದಿದ್ದಾರೆ ಎನ್ನಲಾಗಿದೆ. ಚೆನ್ನೈನಿಂದ 50 ಕಿಮೀ. ದೂರದ ಮಲ್ಮರುವತ್ತೂರ್ ಬಳಿಯ ಕೆನಿಮರ್ ಹಳ್ಳಿಯಲ್ಲಿ ಜೂನ್ 5ರಂದು ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ ನಾಯಿಗಳಿಗೆ ಉಣಿಸಲಾಗಿದೆ. ಅವು ಪ್ರಜ್ಞೆ ತಪ್ಪಿದಾಗ ನಾಯಿಗಳನ್ನು ಜೀವಂತವಾಗಿ ಸುಡಲಾಗಿದೆ ಎಂದು ಪ್ರಾಣಿ ಹಕ್ಕು ರಕ್ಷಣಾ ಕಾರ್ಯಕರ್ತ ಪಿ. ಅಶ್ವಥ್ ಪೊಲೀಸರಿಗೆ ತಿಳಿಸಿದ್ದಾರೆ.

ಅಶ್ವಥ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು ನಾಯಿ ಹತ್ಯೆಯ ಆರೋಪದಲ್ಲಿ ಗ್ರಾಮದ ಮೂವರನ್ನು ಬಂಧಿಸಿದ್ದಾರೆ. ಗ್ರಾಮಸ್ಥರು ತಮ್ಮ ಕುರಿ ಮತ್ತು ಆಡುಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ನಾಯಿಗಳನ್ನು ಹತ್ಯೆ ಮಾಡಿದ್ದಾರೆ, ಆದರೆ ನಾಯಿ ದಾಳಿಯಿಂದ ಕುರಿಗಳು ಸಾವನ್ನಪ್ಪಿಲ್ಲ ಎಂದು ಅಶ್ವಥ್ ಹೇಳಿದ್ದಾರೆ.

ಆಹಾರ ಸೇವಿಸಿ ಪ್ರಜ್ಞೆ ತಪ್ಪಿದ ನಾಯಿಗಳ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಕೆಲ ಅರೆಬೆಂದ ಮೃತದೇಹಗಳನ್ನು ಭೂಮಿಯಲ್ಲಿ ಹೂಳಲಾಗಿದೆ ಎಂದು ಅಶ್ವಥ್ ದೂರಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement