ದೇಶ

ವಿಮಾನಯಾನ ಪ್ರಯಾಣಿಕರಿಗೆ ಬಂತು 'ಅಚ್ಛೇ ದಿನ್'

Manjula VN

ನವದೆಹಲಿ: ವಿಮಾನಯಾನ ಪ್ರಯಾಣಿಕರಿಗೆ 'ಅಚ್ಛೇ ದಿನ್' ಬಂದಿದ್ದು, ಪ್ರಯಾಣಿಕ ಸ್ನೇಹಿ ವಿಮಾನಯಾನ ನೀತಿಗೆ ಕೇಂದ್ರ ಸಂಪುಟ ಬುಧವಾರ ಅಂಗೀಕರಿಸಿದೆ.

ಹೊಸ ನೀತಿಯ ವಿಮಾನಯಾನ ಪ್ರಯಾಣಕ ಸ್ನೇಹಿಯಾಗಲಿದ್ದು, ವಿಮಾನಯಾನ ಇನ್ನು ಮುಂದೆ ದುಬಾರಿಯಾಗಿರುವುದಿಲ್ಲ. ಪ್ರಯಾಣಿಕರ ಮಿತಿ ಮೀರಿದ ಲಗೇಜಿನ ದರವೂ ಹೆಚ್ಚಾಗುವುದಿಲ್ಲ. ವಿಮಾನ ಸಿಬ್ಬಂದಿಗಳು ಒಂದು ಗಂಟೆ ವಿಮಾನಯಾನಕ್ಕೆ ರು. 2500ಕ್ಕಿಂತ ಹೆಚ್ಚಿನ ದರ ನಿಗದಿ ವಸೂಲಿ ಮಾಡುವಂತಿಲ್ಲ.

ಪ್ರಯಾಣಿಕರು ತಮ್ಮೊಂದಿಗೆ ತೆಗೆದುಕೊಂಡು ಹೋಗುವ 15 ಕೆಜಿ ಮೀರಿದ ಲಗೇಜಿಗೆ ಇದುವರೆಗೆ ವಿಧಿಸುತ್ತಿದ್ದ ರು. 300 ಅನ್ನು ಈಗ ರು. 100ಕ್ಕೆ ಇಳಿಸಲಾಗಿದೆ.

ವಿಮಾನಯಾನ ನೀತಿಯನ್ನು ಪ್ರಮುಖವಾಗಿ  5/20 ನೀತಿಯನ್ನು 0/20ಕ್ಕೆ ಪರಿವರ್ತಿಸಲಾಗಿದೆ. 30 ನಿಮಿಷಗಳ ಹಾರಾಟಕ್ಕೆ ರು. 1200 ಗರಿಷ್ಟದರ ಮಾಡಲಾಗಿದೆ. ಇನ್ನು 60 ನಿಮಿಷಗಳ ಹಾರಾಟಕ್ಕೆ ರು. 2500 ಗರಿಷ್ಠ ದರವನ್ನು ನಿಗದಿಪಡಿಸಲಾಗಿದೆ.

ದೇಶೀಯ ವಿಮಾನ ಕಂಪನಿಗಳು ವಿದೇಶಗಳಿಗೆ ವಿಮಾನ ಹಾರಾಟ ನಡೆಸಲು 20 ವಿಮಾನಗಳ ಜತೆಗೆ 5 ವರ್ಷ ದೇಶೀಲಯ ಹಾರಾಟ ಅನುಭವ ಕಡ್ಡಾಯವೆಂಬ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. ಈಗ 20 ವಿಮಾನಗಳಿದ್ದರೆ ವಿದೇಶಗಳಿಗೆ ಹಾರಾಟ ನಡೆಸಬಹುದು.

ಎಲ್ಲಾ ವಿಮಾನಗಳ ಹಾರಾಟಗಳ ಮೇಲೆ ಶೇ.2 ರಷ್ಟು ತೆರಿಗೆ ನೀಡಬೇಕಿದ್ದು, ಈ ಹಣವನ್ನು ಪ್ರಾದೇಶಿಕ ವಿಮಾನ ಹಾರಾಟದ ಉತ್ತೇಜನಕ್ಕೆ ಬಳಕೆ ಮಾಡಲಾಗುತ್ತದೆ. ಡಿಜಿಸಿಎ ಏಕಗವಾಕ್ಷಿ ಮೂಲಕ ನಾಗರಿಕ ವಿಮಾನಯಾನದ ಎಳ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹಾರಗೊಳ್ಳಲಿದೆ.

ದೇಶೀಯ ವಿಮಾನ ಕಂಪನಿಗಳು ವಿದೇಶಿ ಕಂಪನಿಗಳೊಂದಿಗೆ ಯಾವುದೇ ಸ್ಥಳಕ್ಕೆ ಕೋಡ್ ಷೇರಿಂಗ್ ಮಾಡಿಕೊಳ್ಳಲು ಮುಕ್ತವಾಗಿರುತ್ತವೆ. ವಿದೇಶಿ ಸ್ಥಳಗಳಿಗೂ ಕೋಡ್ ಷೇರಿಂಗ್ ವ್ಯವಸ್ಥೆ ಸಂಪೂರ್ಣ ಮುಕ್ತವಾಗಿದೆ.

ವಿಮಾನ ಕಂಪನಿಗಳಲ್ಲಿ ಹೂಡಿಕೆ, ದ್ವಿಪಕ್ಷೀಯ ಹಕ್ಕುಗಳ ನಿರ್ಬಂಧ ಸಡಿಲಿಕೆ. ಬೇಡಿಕೆಗೆ ಅನುಗುಣವಾಗಿ ಏರ್ ಸ್ಟ್ರಿಪ್ ಗಳನ್ನು ಪುನರ್ ನವೀಕರಣ, ವಿಮಾನ ನಿಲ್ದಾಣ ಪ್ರಾಧಿಕಾರ ರು.50 ಕೋಟಿ ವೆಚ್ಚ ಮಿತಿಯಲ್ಲಿ ನಿರ್ವಹಿಸಲಿದೆ.

ಜೂ.3 ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ನೂತನ ವಿಮಾನಯಾನ ನೀತಿಯನ್ನು ಕೇಂದ್ರ ಸಂಪುಟಕ್ಕೆ ಸಲ್ಲಿಸಿತ್ತು. ಕೇಂದ್ರ ಆಡಳಿತಾರೂಢ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2014 ನವೆಂಬರ್ ತಿಂಗಳಿನಲ್ಲಿ ನೂತನ ವಿಮಾನ ನೀತಿ ಪ್ರಕಟಿಸಿತ್ತು.

ನಂತರ ಅ 2015ರಲ್ಲಿ ಪರಿಷ್ಕೃತ ನೀತಿ ಪ್ರಕಟಿಸಿತ್ತು ನೂತನ ನೀತಿ 2016 ಏಪ್ರಿಲ್ ನಿಂದಲೇ ಜಾರಿಯಾಗಬೇಕಿತ್ತು. ಆದರೆ, ಏರ್ ಇಂಡಿಯಾ ಸಿಬ್ಬಂದಿಗಳ ಮುಷ್ಕರ ಮತ್ತು 5/20 ನೀತಿ ಕುರಿತಂತೆ ಭಾಗೀದಾರರೊಂದಿಗೆ ಚರ್ಚಿಸಿ ಒಮ್ಮತ ಮೂಡಿಸುವ ಪ್ರಕ್ರಿಯೆ ವಿಳಂಬವಾಗಿತ್ತು. ಇದರಂತೆ ಬುಧವಾರ ನೂತನ ನೀತಿ ಅಂಗೀಕರಿಸಿದ ನಂತರ ಬಹುತೇಕ ಏರ್ ಲೈನ್ ಕಂಪನಿಗಳ ಷೇರುಗಳು ಏರಿಕೆ ಕಂಡಿವೆ.

SCROLL FOR NEXT