ನವದೆಹಲಿ: ಪ್ರಸ್ತುತ ತೆರಿಗೆದಾರರ ಸಂಖ್ಯೆ 5.43 ಕೋಟಿ ಇದ್ದು, ಅದನ್ನು ಡಬಲ್ ಮಾಡುವಂತೆ, ಅಂದರೆ ತೆರಿಗೆದಾರರ ಸಂಖ್ಯೆಯನ್ನು 10 ಕೋಟಿಗೆ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ದೆಹಲಿಯಲ್ಲಿ ನಡೆಯುತ್ತಿರುವ ತೆರಿಗೆ ಅಧಿಕಾರಿಗಳ ಎರಡು ದಿನಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮೋದಿ, ತೆರಿಗೆ ಪಾವತಿಸುವರಿಗೆ ಕಿರುಕುಳದ ಭಯ ಹೋಗಲಾಡಿಸಿ ಮತ್ತು ತೆರಿಗೆದಾರರೊಂದಿಗೆ ಮೃದುವಾಗಿ ಹಾಗೂ ಗಂಭೀರವಾಗಿ ವರ್ತಿಸಿ ಎಂದು ಸಲಹೆ ನೀಡಿದರು.
ತೆರಿಗೆ ಅಧಿಕಾರಿಗಳು ಆಡಳಿತದ ಐದು ಪ್ರಮುಖ ಅಂಗಗಳಾದ ಆದಾಯ, ಹೊಣೆಗಾರಿಕೆ, ಪ್ರಾಮಾಣಿಕತೆ, ಮಾಹಿತಿ ಮತ್ತು ಡಿಜಿಟಲೀಕರಣಕ್ಕೆ ಒತ್ತು ನೀಡಬೇಕು. ಅಧಿಕಾರಿಗಳು ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಿಸಬೇಕು. ಇದರಿಂದ ತೆರಿಗೆ ಸಂಗ್ರಹಣೆ ಪ್ರಕ್ರಿಯೆ ಉತ್ತಮವಾಗುತ್ತದೆ ಮತ್ತು ತೆರಿಗೆದಾರರಲ್ಲಿ ನಂಬಿಕೆ ಹೆಚ್ಚಾಗುತ್ತದೆ ಎಂದರು.
ಹಣಕಾಸು ಸಚಿವ ಅರುಣ್ ಜೇಟ್ಲಿ, ಹಣಕಾಸು ರಾಜ್ಯ ಸಚಿವ ಜಯಂತ್ ಸಿನ್ಹಾ, ಕೇಂದ್ರ ನೇರ ತೆರಿಗೆ ಮಂಡಳಿಯ ಹಿರಿಯ ಅಧಿಕಾರಿಗಳು, ಕೇಂದ್ರ ಅಬಕಾರಿ ಮತ್ತು ಕಸ್ಟಮ್್ಸ ಮಂಡಳಿಯ ಹಿರಿಯ ಅಧಿಕಾರಿಗಳು ಈ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics