ದೇಶ

ತೆರಿಗೆದಾರರಲ್ಲಿರುವ ಕಿರುಕುಳದ ಭೀತಿಯನ್ನು ಹೋಗಲಾಡಿಸಿ: ಅಧಿಕಾರಿಗಳಿಗೆ ಮೋದಿ ಕರೆ

Srinivas Rao BV

ನವದೆಹಲಿ: ತೆರಿಗೆದಾರರ ಮನಸ್ಸಿನಲ್ಲಿರುವ ಕಿರುಕುಳದ ಭೀತಿಯನ್ನು ಹೋಗಲಾಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ತೆರಿಗೆ ಅಧಿಕಾರಿಗಳಿಗೆ ಸಲಹೆ ನೀಡಿದ್ದು,  ಆಡಳಿತದ 5 ಅಧಾರ ಸ್ತಂಭಗಳಾದ ಆದಾಯ, ಹೊಣೆಗಾರಿಕೆ, ಪ್ರಾಮಾಣಿಕತೆ, ಮಾಹಿತಿ ಮತ್ತು ಡಿಜಿಟೈಸೇಷನ್ ನತ್ತ ಹೆಚ್ಚು ಗಮನ ಹರಿಸಬೇಕೆಂದು ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ರಾಜಸ್ವ್ ಗ್ಯಾನ್ ಸಂಗಮ್ ನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಡಿಜಿಟೈಸೇಷನ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ತೆರಿಗೆದಾರರೊಂದಿಗೆ ಅಧಿಕಾರಿಗಳು ಮೃದುವಾಗಿ ನಡೆದುಕೊಳ್ಳಬೇಕು, ಈ ಮೂಲಕ ತೆರಿಗೆದಾರರಲ್ಲಿರುವ ಅಧಿಕಾರಿಗಳಿಂದ ಕಿರುಕುಳ ಎದುರಾಗುವ ಭೀತಿಯನ್ನು ಹೋಗಲಾಡಿಸಲು ಯತ್ನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜಸ್ವ್ ಗ್ಯಾನ್ ಸಂಗಮ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ, ಕೇಂದ್ರ ನೇರ ತೆರಿಗೆಗಳ ಮಂಡಳಿ, ಸೆಂಟ್ರಲ್ ಬೋರ್ಡ್ ಅಬಕಾರಿ ಮತ್ತು ಕಸ್ಟಮ್ಸ್ ನ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

SCROLL FOR NEXT