ನವದೆಹಲಿ: ಉಡ್ತಾ ಪಂಜಾಬ್ ಚಿತ್ರ ಬಿಡುಗಡೆ ಬಗ್ಗೆ ಮುಂಬೈ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮಧ್ಯವೇಶ ಮಾಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಉಡ್ತಾ ಪಂಜಾಬ್ ಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಪಂಜಾಬ್ ಮೂಲದ ಎನ್ ಜಿ ಒ ಉಡ್ತಾ ಪಂಜಾಬ್ ಬಿಡುಗಡೆಗೆ ತಡೆ ನೀಡಬೇಕೆಂದು ಮನವಿ ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಈಗಾಗಲೇ ಮುಂಬೈ ನ ಹೈಕೋರ್ಟ್ ಉಡ್ತಾ ಪಂಜಾಬ್ ಚಿತ್ರ ಬಿಡುಗಡೆ ಬಗ್ಗೆ ತೀರ್ಪು ನೀಡಿದ್ದು ಹೈಕೋರ್ಟ್ ನ ತೀರ್ಪಿನ ಬಗ್ಗೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾ. ಆದರ್ಶ್ ಕುಮಾರ್ ಗೋಯಲ್, ಎಲ್ ಗಾಗಸ್ವರ ರಾವ್ ನೇತೃತ್ವದ ರಜೆ ಪೀಠ ಹೇಳಿದೆ.
ಆದರೆ ಪಂಜಾಬ್ ಎನ್ ಜಿ ಒ ಮುಂದಿಟ್ಟಿದ್ದ ಮತ್ತೊಂದು ಬೇಡಿಕೆಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದ್ದು, ಚಿತ್ರ ಬಿಡುಗಡೆಯಾದ ನಂತರ ಸುಪ್ರೀಂ ಕೋರ್ಟ್ ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ. ಜೂ.13 ರಂದು ಉಡ್ತಾ ಪಂಜಾಬ್ ಚಿತ್ರ ಬಿಡುಗಡೆ ಬಗ್ಗೆ ತೀರ್ಪು ನೀಡಿದ್ದ ಮುಂಬೈ ನ್ಯಾಯಾಲಯ, ಒಂದು ಕತ್ತರಿ ಪ್ರಯೋಗಕ್ಕೆ ಅನುಮತಿ ನೀಡಿ ಚಿತ್ರ ಬಿಡುಗಡೆ ಮಾಡಬಹುದೆಂದು ತೀರ್ಪು ನೀಡಿತ್ತು.