ದೇಶ

ಐಐಟಿ ಜೆಇಇ ಪರೀಕ್ಷೆಯಲ್ಲಿ ನಕ್ಸಲ್ ಪೀಡಿತ ಪ್ರದೇಶದ ಬುಡಕಟ್ಟು ಬಾಲಕಿಯ ಅದ್ಭುತ ಸಾಧನೆ

Lingaraj Badiger
ಬಸ್ತಾರ್: ನಕ್ಸಲ್ ಪೀಡಿತ ಚತ್ತೀಸ್​ಗಢದ ಬಸ್ತಾರ್ ಜಿಲ್ಲೆಯ ಕುರಂಡಿ ಗ್ರಾಮದ ಸಾವಿತ್ರಿ ಎಂಬ ವಿದ್ಯಾರ್ಥಿನಿ ಐಐಟಿ ಜೆಇಇ ಪರೀಕ್ಷೆಯಲ್ಲಿ 1,135ನೇ ರ್ಯಾಂಕ್ ಗಳಿಸುವ ಮೂಲಕ ತನ್ನ ಗ್ರಾಮದ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಒಬ್ಬ ಬಡ ರೈತನ ಮಗಳಾಗಿರುವ ಸಾವಿತ್ರಿ ಪರಿಶಿಷ್ಟ ಜಾತಿಗೆ ಸೇರಿದ್ದು, ಎರಡು ವರ್ಷಗಳ ಹಿಂದೆ ಪುಸ್ತಕಗಳನ್ನೂ ತೆಗೆಯುವ ಸ್ಥಿತಿಯಲ್ಲಿರಲಿಲ್ಲ. ಕಾರಣ ಬಡತನದಲ್ಲಿ ಓದು ಮುಂದುವರಿಸುವುದು ಕಷ್ಟ ಎನ್ನುವ ಸ್ಥಿತಿ ಇತ್ತು. ಆದರೆ ಆಕೆಗೆ ನೆರವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಕೋಚಿಂಗ್ ಕಲ್ಪಿಸಲು ಚತ್ತೀಸ್​ಗಢ ಸರ್ಕಾರದ ಪ್ರಯಾಸ್ ಯೋಜನೆ. ಇದೇ ಯೋಜನೆಯ ಅಡಿಯಲ್ಲಿ ಪ್ರವೇಶ ಪರೀಕ್ಷೆ ಬರೆದು ಪ್ರವೇಶ ಪಡೆದ ಸಾವಿತ್ರಿ ದೇಶವೇ ಗಮನಿಸುವಂತಹ ಸಾಧನೆ ಮಾಡಿದ್ದಾಳೆ.
10 ಎಕರೆ ಕೃಷಿ ಭೂಮಿ ಮತ್ತು ಚಿಕ್ಕ ಗುಡಿಸಲನ್ನು ಆಶ್ರಯಿಸಿರುವ ಸಾವಿತ್ರಿಯ ತಂದೆ, ತಾಯಿ ಅನಕ್ಷರಸ್ಥರು. ಐಐಟಿ ಶಿಕ್ಷಣ ಸಂಸ್ಥೆಗಳಲ್ಲಿ ಏಷ್ಯಾದಲ್ಲೇ 51ನೇ ಸ್ಥಾನ ಪಡೆದಿರುವ ಖರಗ್​ಪುರದಲ್ಲಿ ಕಾಲೇಜಿನಲ್ಲಿ ಐಐಟಿ ಪದವಿ ಮಾಡಬೇಕು ಎನ್ನುವುದು ಸಾವಿತ್ರಿಯ ಮುಂದಿನ ಗುರಿಯಾಗಿದೆ.
SCROLL FOR NEXT