ಭೂಪಾಲ್: ಕಾಲೇಜಿಗೆ ಹೋಗುವ ಸಲುವಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಶಿಕ್ಷಕಿಯೊಬ್ಬಳ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ದಾಳಿ ಮಾಡಿರುವ ಘಟನೆಯೊಂದು ಭೂಪಾಲ್ ನ ಪೂಶಾ ಪ್ರದೇಶದ ಕಾಲೋನಿಯಲ್ಲಿ ಶನಿವಾರ ನಡೆದಿದೆ.
ಶೈಲಜಾ (24) ಆ್ಯಸಿಡ್ ದಾಳಿಗೊಳಗಾದ ಶಿಕ್ಷಕಿ.. ಶೈಲಜಾ ಅವರು ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಎಂದಿನಂತೆ ನಿನ್ನೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾಲೇಜಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದರು.
ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿರುವ ದುಷ್ಕರ್ಮಿಗಳಿಬ್ಬರು ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದಿದ್ದಾರೆ. ನಂತರ ಕೈಯಲ್ಲಿದ್ದ ಆ್ಯಸಿಡ್ ನಿಂದ ಆಕೆಯ ಮೇಲೆ ದಾಳಿ ಮಾಡಿ ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಶೈಲಜಾ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೈಲಜಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ದಾಳಿ ವೇಳೆ ದುಷ್ಕರ್ಮಿಗಳು ಮುಸುಕು ಹಾಕಿಕೊಂಡು ಬಂದಿದ್ದರಿಂದ ದಾಳಿಕೋರರ ಸುಳಿವು ಈವರೆಗೂ ಸಿಕ್ಕಲ್ಲ ಎಂದು ತಿಳಿದುಬಂದಿದೆ.