ನಡಬೆಟ್(ಗುಜರಾತ್): ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ದೇಶದ ಗಡಿ ರಕ್ಷಣೆ ಮಾಡಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಆಧುನಿಕ ತಂತ್ರಜ್ಞಾನ ಬಳಿಸಿಕೊಂಡು ದೇಶದ ಗಡಿ ಭದ್ರತೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು. ಇನ್ನು ನಮ್ಮ ದೇಶದ ಗಡಿಯನ್ನು ಯೋಧರು ಸಮರ್ಥವಾಗಿ ರಕ್ಷಣೆ ಮಾಡಿದ್ದಾರೆ. ಯೋಧರೊಂದಿಗೆ ತಂತ್ರಜ್ಞಾನವನ್ನು ಸಹ ಗಡಿ ರಕ್ಷಣೆಗೆ ಬಳಕೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಗಡಿಯಲ್ಲಿ ರಾಡಾರ್, ಲೇಸರ್ ಕಿರಣಗಳು, ಸಿಸಿಟಿವಿ ಹಾಗೂ ಸೆನ್ಸರ್ ಗಳನ್ನು ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ. ಇದರೊಂದಿಗೆ ಯೋಧರ ಹೊರೆಯನ್ನು ಸ್ವಲ್ಪ ತಗ್ಗಿಸಲಾಗುವುದು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.