ತಿರುವನಂತಪುರ: ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಸುಮಾರ 400 ಮನೆಗಳು ಹಾನಿಯಾಗಿರುವ ಘಟನೆ ತಿರುವನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಸುಮಾರು 16 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಸುಮಾರು 412 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮಳೆ ಸಂಬಂಧಿತ ಕಾರಣಗಳಿಂದಾಗಿ ಹಲವು ಅನಾಹುತಗಳು ವರದಿಯಾಗಿವೆ. ಇನ್ನೂ ಬೆಳೆಗಳು ಹಾಳಾಗಿವೆ.
ಇನ್ನೂ ಮುಂದಿನ ಗುರವಾರದವರೆಗೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಕಡಲ ತೀರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.