ದೇಶ

ಚೀನಾಗೆ ವಿದೇಶಾಂಗ ಕಾರ್ಯದರ್ಶಿ ಭೇಟಿ: ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಬೆಂಬಲದ ಬಗ್ಗೆ ಗರಿಗೆದರಿದ ನಿರೀಕ್ಷೆ

Srinivas Rao BV

ನವದೆಹಲಿ: ವಿಶ್ವಸಂಸ್ಥೆಯ ಪರಮಾನು ಪೂರೈಕೆದಾರ ಸಮೂಹಕ್ಕೆ ಸೇರ್ಪಡೆಗೊಳ್ಳಲು ಭಾರತ ಎನ್ ಪಿಟಿ ಗೆ ಸಹಿ ಹಾಕಬೇಕೆಂದು ಚೀನಾ ಈಗಾಗಲೇ ಸ್ಪಷ್ಟಡಿಸಿದ್ದರೂ,  ಭಾರತದ ಸದಸ್ಯತ್ವಕ್ಕೆ ಚೀನಾ ಬೆಂಬಲ ನೀಡುವ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಇದಕ್ಕೆ ಕಾರಣ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಎಸ್ ಜೈಶಂಕರ್ ಅವರ ಇತ್ತೀಚಿನ ಚೀನಾದ ಭೇಟಿ.

ಜೂ.16 -17 ರಂದು ಚೀನಾಗೆ ಭೇಟಿ ನೀಡಿದ್ದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಜೈಶಂಕರ್, ಸುದೀರ್ಘವಾದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಭಾರತದ ಎನ್ ಎಸ್ ಜಿ ಸದಸ್ಯತ್ವದ ಬಗ್ಗೆಯೂ ಚೀನಾ ವಿದೇಶಾಂಗ ಇಲಾಖೆ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಿದ್ದಾರೆ. ರಷ್ಯಾ, ಅಮೆರಿಕ, ಬ್ರಿಟನ್ ಸೇರಿದಂತೆ ಎನ್ಎಸ್ ಜಿ ಯ ಪ್ರಮುಖ ರಾಷ್ಟ್ರಗಳು ಈಗಾಗಲೇ ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಭಾರತದ ಸೇರ್ಪಡೆಗೆ ಇನ್ನೂ ವಿರೋಧಿಸುವುದು ಚೀನಾಗೆ ಕಷ್ಟಸಾಧ್ಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಂದು ವೇಳೆ ಭಾರತದ ಸದಸ್ಯತ್ವಕ್ಕೆ ಚೀನಾ ಇನ್ನೂ ವಿರೋಧ ವ್ಯಕ್ತಪಡಿಸಿದ್ದೇ ಆದರೆ ಎನ್ಎಸ್ ಜಿ ಯ ಪ್ರಮುಖ, ಬಲಿಷ್ಠ ರಾಷ್ಟ್ರಗಳ ಪೈಕಿ ಭಾರತದ ಸದಸ್ಯತ್ವಕ್ಕೆ ವಿರೋಧಿಸುತ್ತಿರುವ ಏಕೈಕ ರಾಷ್ಟ್ರ ಚೀನಾ ಅಗಿರಲಿದೆ. ಈ ಬಗ್ಗೆ ಜೈಶಂಕರ್ ಚರ್ಚಿಸಿದ್ದು, ಚೀನಾ ತನ್ನ ನಿಲುವನ್ನು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತ ಎನ್ ಪಿ ಟಿ ಗೆ ಸಹಿ ಹಾಕಿದ್ದೇ ಆದರೆ ಎನ್ ಎಸ್ ಜಿ ಸಮೂಹಕ್ಕೆ ಸೇರ್ಪಡೆಗೊಳ್ಳುವ ವಿಚಾರದಲ್ಲಿ ಬೆಂಬಲ ನೀಡಲು ಸಿದ್ಧವಿರುವುದಾಗಿ ಚೀನ ಈ ಹಿಂದೆಯೇ ಸ್ಪಷ್ಟಪಡಿಸಿತ್ತು.

SCROLL FOR NEXT