ಲಾಲ್ಕೇಶ್ವರ ಸಿಂಗ್ 
ದೇಶ

ಬಿಹಾರ ಟಾಪರ್ ಗಳ ಪ್ರಕರಣ: ಬಿಎಸ್ಇಬಿ ಮಾಜಿ ಅಧ್ಯಕ್ಷ ಲಾಲ್ಕೇಶ್ವರ ಸಿಂಗ್, ಪತ್ನಿ ಉಷಾ ಬಂಧನ

12ನೇ ತರಗತಿಯ ವಿಜ್ಞಾನ ಮತ್ತು ಕಲಾ ವಿಭಾಗದ ಟಾಪರ್ ಗಳ ಫಲಿತಾಂಶದಲ್ಲಿನ ಅಕ್ರಮ ಪ್ರಕರಣದ ಪ್ರಮುಖ ರೂವಾರಿ ಬಿಹಾರ ಶಾಲಾ....

ಪಟನಾ: 12ನೇ ತರಗತಿಯ ವಿಜ್ಞಾನ ಮತ್ತು ಕಲಾ ವಿಭಾಗದ ಟಾಪರ್ ಗಳ ಫಲಿತಾಂಶದಲ್ಲಿನ ಅಕ್ರಮ ಪ್ರಕರಣದ ಪ್ರಮುಖ ರೂವಾರಿ ಬಿಹಾರ ಶಾಲಾ ಪರೀಕ್ಷಾ ಮಂಡಳಿ(ಬಿಎಸ್ಇಬಿ)ಯ ಮಾಜಿ ಅಧ್ಯಕ್ಷ ಲಾಲ್ಕೇಶ್ವರ ಪ್ರಸಾದ್ ಸಿಂಗ್ ಹಾಗೂ ಆತನ ಪತ್ನಿ ಉಷಾ ಸಿನ್ಹಾ ಅವರನ್ನು ಸೋಮವಾರ ಬಂಧಿಸಲಾಗಿದೆ.
ಬಿಎಸ್ಇಬಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಭೂಗತರಾಗಿದ್ದ ಲಾಲ್ಕೇಶ್ವರ ಸಿಂಗ್ ಹಾಗೂ ಆತನ ಪತ್ನಿ ಜೆಡಿಯು ಮಾಜಿ ಶಾಸಕಿ ಉಷಾ ಸಿನ್ಹಾ ವಿರುದ್ಧ ಜೂನ್ 15ರಂದು ಪಟನಾ ಸಿವಿಲ್ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಇಂದು ಪ್ರಮುಖ ಆರೋಪಿ ಲಾಲ್ಕೇಶ್ವರ್ ಪ್ರಸಾದ್ ಸಿಂಗ್ ಹಾಗೂ ಆತನ ಪತ್ನಿಯನ್ನು ಬಂಧಿಸಿದೆ.
ಪ್ರಕರಣ ಸಂಬಂಧ ಎಸ್ಐಟಿ ಈಗಾಗಲೇ ಸಿಂಗ್ ಅವರ ಆಪ್ತ ಕಾರ್ಯದರ್ಶಿಯನ್ನು ಬಂಧಿಸಿದ್ದು, ಪ್ರಕರಣದಲ್ಲಿ ಸಿಂಗ್ ಅವರ ಪತ್ನಿ ಉಷಾ ಸಿನ್ಹಾ ಅವರ ಕೈವಾಡವಿದೆ ಎಂದೂ ಶಂಕಿಸಲಾಗಿದೆ. 
ಕಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ರೂಬಿ ರಾಯ್ ರಾಜಕೀಯ ಶಾಸ್ತ್ರ ಅಡುಗೆ ಸಬ್ಜೆಕ್ಟ್ ಎಂದ ಬೆನ್ನಲ್ಲೇ ಪಿಯು ಪರೀಕ್ಷಾ ಮಂಡಳಿ 14 ಟಾಪರ್​ಗಳಿಗೆ ಮರು ಪರೀಕ್ಷೆ ನಡೆಸಿತ್ತು. ಇದರಲ್ಲಿ ಸೌರಭ್ ಶ್ರೇಷ್ಠ, ರಾಹುಲ್ ಕುಮಾರ್, ರೂಬಿ ರಾಯ್ ಹಾಗೂ ಶಾಲಿನಿ ಎಂಬುವರು ಅನುತ್ತೀರ್ಣರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!