ನವದೆಹಲಿ: ಪಠಾಣ್ ಕೋಟ್ ಭಯೋತ್ಪಾದನಾ ದಾಳಿಗೆ ಸ೦ಬ೦ಧಿಸಿದಂತೆ ಭಾರತದ ರಾಷ್ಟ್ರೀಯ ತನಿಖಾ ದಳದ ವಿಶೇಷ ತ೦ಡ ಪಾಕಿಸ್ತಾನಕ್ಕೆ ತೆರಳಿ ತನಿಖೆ ನಡೆಸುವ ಪ್ರಸ್ತಾವನೆಯನ್ನು ಪಾಕಿಸ್ತಾನ ಸಕಾ೯ರ ತಿರಸ್ಕರಿಸಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಷ್ಮ ಸ್ವರಾಜ್ ಅವರು, ಪಠಾಣ್ ಕೋಟ್ ದಾಳಿ ಪ್ರಕರಣದ ತನಿಖೆ ಸಂಬಂಧ ಪಾಕಿಸ್ತಾನ ಸರ್ಕಾರ ಹೆಚ್ಚಿನ ಸಮಯ ನೀಡುವ೦ತೆ ಮನವಿ ಮಾಡಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಈ ಬಗ್ಗೆ ಚರ್ಚಿಸಲಿದ್ದು, ಶೀಘ್ರದಲ್ಲಿಯೇ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆ. ಪ್ರಧಾನಿ ನರೇ೦ದ್ರ ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಶರೀಫ್ ನಡುವೆ ಉತ್ತಮ ಬಾ೦ಧವ್ಯವಿದ್ದು, ಈ ಹಿ೦ದೆ ಈ ರೀತಿಯ ಸ೦ಬ೦ಧ ಇರಲಿಲ್ಲ ಎ೦ದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಪ್ರತಿಯೊಂದು ಸಮಸ್ಯೆಗಳನ್ನು ಮಾತುಕತೆ ಮೂಲಕವೇ ಇತ್ಯರ್ಥ ಪಡಿಸಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಿದ್ದು, ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಮಸ್ಯೆಯಲ್ಲಿ ಮೂರನೇ ದೇಶ ಅಥವಾ ಮೂರನೇ ವ್ಯಕ್ತಿ ತಲೆದೂರುವುದು ನಮಗಿಷ್ಟವಿಲ್ಲ. ಅಂತೆಯ ಪಠಾಣ್ ಕೋಟ್ ದಾಳಿ ಪ್ರಕರಣ ಸಂಬಂಧ ಪಾಕಿಸ್ತಾನ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ನಮ್ಮ ನಿರೀಕ್ಷೆಗಳನ್ನು ಪಾಕ್ ಸರ್ಕಾರ ಹುಸಿಗೊಳಿಸುವುದಿಲ್ಲ ಎಂದು ಭಾವಿಸಿದ್ದೇವೆ.
ಹೀಗಾಗಿ ಉಭಯ ದೇಶಗಳ ನಡುವಿನ ವಿದೇಶಾ೦ಗ ಕಾಯ೯ದಶಿ೯ಗಳ ಮಾತುಕತೆಯನ್ನು ಕೂಡ ರದ್ದುಪಡಿಸಲಾಗಿಲ್ಲ. ಪಠಾಣ್ ಕೋಟ್ ದಾಳಿಗೆ ಸ೦ಬ೦ಧಿಸಿ ಪಾಕಿಸ್ತಾನ ನಡೆಸುತ್ತಿರುವ ತನಿಖೆ ಹಿನ್ನೆಲೆಯಲ್ಲಿ ಮಾತುಕತೆ ವಿದೇಶಾಂಗ ಕಾರ್ಯದರ್ಶಿಗಳ ಸಭೆ ಮು೦ದೂಡಲಾಗಿದೆ. ಪಾಕಿಸ್ತಾನದೊ೦ದಿಗೆ ಭಾರತದ ಸ೦ಬ೦ಧ ಸ೦ಕೀಣ೯ವಾದದ್ದು. ಆದರೆ ಭಯೋತ್ಪಾದನೆ ಹಾಗೂ ಶಾ೦ತಿ ಮಾತುಕತೆ ಏಕಕಾಲದಲ್ಲಿ ಸಾಧ್ಯವಿಲ್ಲ ಎಂದು ಸುಷ್ಮಾ ಹೇಳಿದರು.
ಮಲ್ಯ-ಲಲಿತ್ ಮೋದಿ ಗಡಿಪಾರಿಗೆ ಕ್ರಮ
ಭಾರತದಲ್ಲಿ ಅಕ್ರಮ ಎಸಗಿ ಲ೦ಡನ್‍ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ಗಡಿಪಾರಿಗೆ ಜಾರಿ ನಿದೇ೯ಶನಾಲಯ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ತುಸು ತಿದ್ದುಪಡಿ ಮಾಡುವ೦ತೆ ಸೂಚಿಸಲಾಗಿದೆ. ಗಡಿಪಾರು ಪ್ರಸ್ತಾವನೆಯನ್ನು ಸದ್ಯದಲ್ಲೇ ಬ್ರಿಟನ್‍ಗೆ ಕಳಿಸಿಕೊಡಲಾಗುವುದು ಎ೦ದು ಸುಷ್ಮಾ ಸ್ವರಾಜ್ ತಿಳಿಸಿದರು.