ಭಾರತದಿಂದಾಚೆಗೆ 'ಸಣ್ಣ ಪ್ರವಾಸ' ಬೆಳೆಸಿದ ರಾಹುಲ್ ಗಾಂಧಿ
ತಮ್ಮ ೪೬ನೇ ಜನ್ಮ ದಿನದ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಣ್ಣ ಪ್ರವಾಸಕ್ಕಾಗಿ ದೇಶದಿಂದ ಹೊರಗೆ ಹೋಗುವುದಾಗಿ ಸೋಮವಾರ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಆದರೆ ಯಾವ ಜಾಗಕ್ಕೆ ಪ್ರವಾಸ
ನವದೆಹಲಿ: ತಮ್ಮ ೪೬ನೇ ಜನ್ಮ ದಿನದ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಣ್ಣ ಪ್ರವಾಸಕ್ಕಾಗಿ ದೇಶದಿಂದ ಹೊರಗೆ ಹೋಗುವುದಾಗಿ ಸೋಮವಾರ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಆದರೆ ಯಾವ ಜಾಗಕ್ಕೆ ಪ್ರವಾಸ ತೆರಳಲಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ.
"ಸಣ್ಣ ಪ್ರವಾಸಕ್ಕಾಗಿ ಕೆಲವು ದಿನಗಳಿಗೆ ದೇಶದಿಂದ ಹೊರಗೆ ಹೋಗಲಿದ್ದೇನೆ. ನೆನ್ನೆ(ಭಾನುವಾರ) ಭೇಟಿ ಮಾಡಿ ಹರಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಜನ್ಮದಿನವಾದ ಭಾನುವಾರದಂದು ಕಾಂಗ್ರೆಸ್ ಪಕ್ಷದ ಮುಖ್ಯ ಕಚೇರಿಯಲ್ಲಿ ನೂರಾರು ಕಾರ್ಯಕರ್ತರನ್ನು ರಾಹುಲ್ ಭೇಟಿ ಮಾಡಿದ್ದರು.
ಬಜೆಟ್ ಸಮಯವಾದ ಫೆಬ್ರವರಿ-ಏಪ್ರಿಲ್ ೨೦೧೫ರ ಸಮಯದಲ್ಲಿ ೬೦ ದಿನಗಳ ಪ್ರವಾಸ ತೆರಳಿದ್ದ ರಾಹುಲ್ ಗಾಂಧಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ಡಿಸೆಂಬರ್ ಸಮಯದಲ್ಲಿ ಹೊಸ ವರ್ಷಕ್ಕೆ ಮತ್ತೆ ಪ್ರವಾಸಕ್ಕೆ ತೆರಳಿದ್ದರು. ಇದೇ ಮೊದಲ ಬಾರಿಗೆ ತಮ್ಮ ಪ್ರವಾಸವನ್ನು ಟ್ವಿಟ್ಟರ್ ಮೂಲಕ ಸಾರ್ವಜನಿಕಗೊಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.