ದೇಶ

ದೃಷ್ಟಿದೋಷವಿದ್ದರೂ ಮೊಬೈಲ್ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ವ್ಯಕ್ತಿ!

Srinivas Rao BV

ನವದೆಹಲಿ: ಕಣ್ಣು ಸರಿಯಾಗಿ ಕಾಣಿಸುತ್ತಿದ್ದರೂ ಕೆಲವೊಮ್ಮೆ ಕಳ್ಳರನ್ನು ಹಿಡಿಯಲು ವಿಫಲರಾಗುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ದೃಷ್ಟಿದೋಷ ಹೊಂದಿದ್ದರೂ, ತನ್ನ ಮೊಬೈಲ್ ಕಳ್ಳತನ ಮಾಡಿದವರನ್ನು ಹಿಡಿದಿದ್ದಾರೆ.

ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಬಳಿ ಈ ಘಟನೆ ನಡೆದಿದ್ದು ಶಕೀರ್ ಎಟಿಎಂ ಕೌಂಟರ್ ಗೆ ಹೋಗುತ್ತಿರಬೇಕಾದರೆ, ಮೂರು ಜನರ ಗುಂಪೊಂದು ಅವರನ್ನು ಗುರಿಯಾಗಿರಿಸಿಕೊಂಡು ಮೊಬೈಲ್ ಕಳ್ಳತನ ಮಾಡಲು ಯತ್ನಿಸಿದೆ. ತಕ್ಷಣವೇ ಎಚ್ಚೆತ್ತ ಶಕೀರ್, ಮೂರು ಜನರ ಪೈಕಿ ಒಬ್ಬನನ್ನು ಹಿಡಿದು ಬೈಕ್ ನಿಂದ ಕೆಳಗೆ ಉರುಳಿಸಿದ್ದಾರೆ. ಮೂವರಲ್ಲಿ ಇಬ್ಬರು ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದು ಓರ್ವ ಸಿಕ್ಕಿಬಿದ್ದಿದ್ದಾನೆ.

ಬೈಕ್ ನಿಂದ ಕೆಳಗೆ ಬೀಳುತ್ತಿದ್ದಂತೆಯೇ ಶರೀಕ್ ದೃಷ್ಟಿದೋಷವುಳ್ಳ ವ್ಯಕ್ತಿ ಎಂದು ತಿಳಿದ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಶಕೀರ್ ಮೇಲೆ ಹಲ್ಲೆ ನಡೆಸಿದ್ದಾನೆ. ಆದರೆ ಆ ವೇಳೆಗೆ ಘಟನಾ ಸ್ಥಳಕ್ಕೆ ಸ್ಥಳಿಯರು ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.    
 
ಮೊಬೈಲ್ ಕಳ್ಳತನ ಮಾಡಲು ಯತ್ನಿಸಿದ ಯುವಕನನ್ನು ವಿಜಯ್ ಎಂದು ಗುರುತಿಸಲಾಗಿದ್ದು, ಆತನ ಸಹಚರರಾದ ಧೀರಜ್, ಪಪ್ಪು ತಪ್ಪಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಶೋಧಕಾರ್ಯಾಚರಣೆ ನಡೆಯುತ್ತಿದೆ ಎಂದು ದೆಹಲಿಯ ವಾಯುವ್ಯ ವಿಭಾಗದ ಡಿಸಿಪಿ ವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

SCROLL FOR NEXT