ನವದೆಹಲಿ: ಸಕಾಲಕ್ಕೆ ತೆರಿಗೆ ಪಾವತಿಸದೇ ವಂಚಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಾನ್ ಕಾರ್ಡ್ ಹಾಗೂ ಎಲ್ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ರದ್ದುಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಇದೇ ಆರ್ಥಿಕ ವರ್ಷದಿಂದ ಈ ನೀತಿ ಜಾರಿಗೆ ತರಲು ಚರ್ಚೆ ನಿರ್ಧರಿಸಲಾಗಿದ್ದು, ಆದಾಯ ತೆರಿಗೆ ಇಲಾಖೆ ಸಿದ್ಧಪಡಿಸಿರುವ ಪ್ರಸ್ತಾವನೆಯ ಪ್ರಕಾರ ತೆರಿಗೆ ಕಟ್ಟದೆ ವಂಚಿಸುವವರಿಗೆ ಸಾರ್ವಜನಿಕ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಸಾಲ ಸೌಲಭ್ಯ ಸಹ ದೊರೆಯುವುದಿಲ್ಲ.
ಆದಾಯ ತೆರಿಗೆ ಇಲಾಖೆ ಈ ಸಂಬಂಧ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳಿಸಿಕೊಡಲಾಗಿದ್ದು, ತೆರಿಗೆ ವಂಚಿಸುವವರ ಎಲ್ಪಿಜಿ ಸಬ್ಸಿಡಿ ಹಣ ನೇರವಾಗಿ ಖಾತೆಗೆ ಜಮಾ ಆಗದಂತೆ ತಡೆಗಟ್ಟಲು ಸೂಚಿಸಿದೆ.
ಚರಾಸ್ತಿ, ಸ್ಥಿರಾಸ್ತಿ ಖರೀದಿ ಅಥವಾ ಬಟಾವಣೆಯಲ್ಲಿ ಪಾನ್ ಕಾರ್ಡ್ ಸಂಖ್ಯೆ ನಮೂದಿಸುವುದು ಕಡ್ಡಾಯ, ತೆರಿಗೆ ಕಟ್ಟದಿದ್ದರೆ ಪಾನ್ ಕಾರ್ಡ್ ಕೂಡ ರದ್ದುಗೊಳಿಸುವ ನಿರ್ಧಾರಕ್ಕೆ ತೆರಿಗೆ ಇಲಾಖೆ ಮುಂದಾಗಿದೆ. ಪ್ರತಿ ವರ್ಷ ತೆರಿಗೆ ವಂಚನೆಯಿಂದ ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ ಇದನ್ನು ತಡೆಗಟ್ಟಲು ಈ ರೀತಿಯ ಕ್ರಮ ಕೈಗೊಂಡಿರುವುದಾಗಿ ತೆರಿಗೆ ಇಲಾಖೆ ತಿಳಿಸಿದೆ.