ನವದೆಹಲಿ: ಬಾಯೆರ್ ಕ್ರಾಪ್ ಸೈನ್ಸ್ ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ಉದ್ಯಮಿ ವಿಜಯ್ ಮಲ್ಯ ರಾಜಿನಾಮೆ ನೀಡಿದ್ದಾರೆ.
2004ರಲ್ಲಿ ಬೋರ್ಡ್ ಆಫ್ ಡೈರೆಕ್ಟರ್ ಮತ್ತು ಚೇರ್ ಮನ್ ಸ್ಥಾನಕ್ಕೆ ನೇಮಕವಾಗಿದ್ದ ವಿಜಯ್ ಮಲ್ಯ 12 ವರ್ಷಗಳ ತಮ್ಮ ಅಧ್ಯಕ್ಷ ಸ್ಥಾನವನ್ನು ತಿಂಗಳ ಅಂತ್ಯಕ್ಕೆ ತೆರವುಗೊಳಿಸಲಿದ್ದಾರೆ ಎಂದು ಬಾಯೆರ್ ಕ್ರಾಪ್ ಸೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಬಹುಕೋಟಿ ವಂಚನೆ ಪ್ರಕರಣದಲ್ಲಿ ಘೋಷಿತ ಸುಸ್ತಿದಾರ ಆಗಿರುವ ವಿಜಯ್ ಮಲ್ಯ ಸದ್ಯ ವಿದೇಶದಲ್ಲಿದ್ದು, ಆರೋಗ್ಯ ಮತ್ತು ಕೃಷಿ ವಿಜ್ಞಾನ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಬಾಯೆರ್ ಕಂಪನಿಯಿಂದ ಹಿಂದೆ ಸರಿದಿದ್ದಾರೆ.